Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿನ್ಜೊ ಸೇರಿ ಇತರ ವ್ಯಾಪಾರಿಗಳ ವಿರುದ್ಧದ ಹಣ ವರ್ಗಾವಣೆ ಪ್ರಕರಣ ; ‘ಫೋನ್ ಪೇ’ಗೆ ‘ED’ ಸಮನ್ಸ್!

02/02/2026 5:25 PM

ಹೊಸ ‘ಲಗೇಜ್ ನಿಯಮ’ಗಳ ಅಡಿಯಲ್ಲಿ ನೀವು ವಿದೇಶದಿಂದ ಎಷ್ಟು ‘ಚಿನ್ನಾಭರಣ’ ಸುಂಕ ರಹಿತವಾಗಿ ತರಬಹುದು ಗೊತ್ತಾ.?

02/02/2026 5:08 PM

ಎದ್ದು ನಿಂತು ಕೂಡಲೆ ತಲೆ ತಿರುಗಿದಂತೆ ಅನಿಸ್ತಿದ್ಯಾ.? ಇದು ಯಾವ ರೋಗದ ಲಕ್ಷಣ ಗೊತ್ತಾ.?

02/02/2026 4:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರದ ವಿಷಯ ಹಾಗಿರಲಿ, ಜನರಿಗೆ ಇವರೆಷ್ಟು ಪರಿಹಾರ ಕೊಟ್ಟಿದ್ದಾರೆ: ರಾಜ್ಯ ಸರ್ಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ
KARNATAKA

ಕೇಂದ್ರದ ವಿಷಯ ಹಾಗಿರಲಿ, ಜನರಿಗೆ ಇವರೆಷ್ಟು ಪರಿಹಾರ ಕೊಟ್ಟಿದ್ದಾರೆ: ರಾಜ್ಯ ಸರ್ಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

By kannadanewsnow0928/04/2024 2:26 PM

ಬೆಂಗಳೂರು: ಬರ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಯ ಬಗ್ಗೆ ಕೇಂದ್ರದ ಕಡೆ ಕೈ ತೋರಿಸುವ ಕಾಂಗ್ರೆಸ್ ಸರಕಾರ ಬರದಿಂದ ನೊಂದಿರುವ ಜನರಿಗೆ ಏನು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಾಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ್ದ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಕೇಂದ್ರ ಸರಕಾರ ₹3,454 ಕೋಟಿ ಪರಿಹಾರ ನೀಡಿದೆ. ಕಡಿಮೆ ಬಂದಿದೆ ಎಂದರೆ ಕೇಳಲಿ, ಅದು ಬಿಟ್ಟು ರಾಜಕೀಯ ಮಾಡಿಕೊಂಡಿದ್ದರೆ ಉಪಯೋಗವೇನು? ಎಂದರು.

ಹಣ ಬಿಡುಗಡೆ ಮಾಡುವಾಗ ಎಲ್ಲಾ ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಂಡಿರುತ್ತದೆ. ಹಣ ಸಾಕಾಗಲಿಲ್ಲ ಎಂದರೆ ಇವರು ಕೇಳಿದಷ್ಟು ಹಣ ಕೊಡಲು ಸಾಧ್ಯವೇ? ಒಕ್ಕೂಟ ವ್ಯವಸ್ಥೆ ಎನ್ನುವುದು ಇದೆಯಲ್ಲ. 15ನೇ ಹಣಕಾಸಿನ ಆಯೋಗದ ಶಿಫಾರಸಿನ ಹಿನ್ನಲೆಯಲ್ಲಿ ಹಣ ಬರುತ್ತದೆ. ರಾಜ್ಯದಲ್ಲಿ ತೀವ್ರ ಬರವಿದೆ, ಅದಕ್ಕೆ ರಾಜ್ಯ ಸರ್ಕಾರ ಏನು ಮಾಡಿದೆ? ₹2000 ಕೊಡುತ್ತೇವೆ ಎಂದರು, ಯಾರಿಗೆ ಹೋಗಿದೆ? ಎಷ್ಟು ಜನಕ್ಕೆ ಹಣ ತಲುಪಿದೆ? ಆ ₹2000ದಲ್ಲಿ ಕೇಂದ್ರ ಸರಕಾರದ ಹಣ ಸೇರಿದೆ. ಅದನ್ನು ಈ ಸರ್ಕಾರ ಹೇಳಬೇಕಲ್ಲವೇ? ಎಂದು ಹೇಳಿದರು.

ಇವರು ರಾಜ್ಯ ಬರ ಪರಿಹಾರ ನಿಧಿ )SDRF) ಯಿಂದ ಎಷ್ಟು ಹಣ ಕೊಟ್ಟಿದ್ದಾರೆ? ಮಂಡ್ಯ ಜನರು ನನಗೆ ಹೇಳಿದರು, ಸರ್ಕಾರದಿಂದ ಒಂದು ರೂಪಾಯಿ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ರೈತರು ₹2000 ಬಂದಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಬರ ನಿರ್ವಹಣೆಯಲ್ಲಿ ಇವರು ಸಂಪೂರ್ಣ ವಿಫಲರಾಗಿದ್ದಾರೆ. ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ಇವರು ಸದಾ ಕೇಂದ್ರ ಸರಕಾರದ ಮೇಲೆ ಮೇಲೆ ಟೀಕೆ ಮಾಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.

ಇವರನ್ನು ತೃಪ್ತಿಪಡಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಕೆಲವೊಂದು ಮಾರ್ಗದರ್ಶನದ ಮೇಲೆ ಅನುಧಾನ ಬಿಡುಗಡೆ ಮಾಡ್ತಾರೆ ಎಂದರು.

ಪ್ರಚಾರಕ್ಕೆ ತೆರಳುತ್ತೇನೆ

ಕಲಬುರಗಿ, ರಾಯಚೂರು, ಹೊಸಪೇಟೆ, ಶಿವಮೊಗ್ಗ ಲೋಕಸಭೆ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ. ನಾಳೆ ಹೊಸಪೇಟೆಗೆ ಹೋಗುತ್ತಿದ್ದೇನೆ. ಎರಡನೇ ಹಂತದ ಚುನಾವಣೆಗೆ ಎಲ್ಲೆಲ್ಲಿ ಅವಶ್ಯಕತೆ ಇದ್ಯೋ ಅಲ್ಲಿಗೆ ಹೋಗುತ್ತೇನೆ. ನನ್ನ ಅಭಿಪ್ರಾಯದ ಪ್ರಕಾರ NDA 14 ಕ್ಷೇತ್ರಗಳಲ್ಲಿ 12 ರಿಂದ 13 ಸ್ಥಾನ ಗೆಲ್ಲುತ್ತದೆ ಎಂದು ಅವರು ತಿಳಿಸಿದರು.

ಮಂಡ್ಯದಲ್ಲಿ 81%ಕ್ಕೂ ಹೆಚ್ಚು ಮತದಾನ ಆಗಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆದ 14 ಕ್ಷೇತ್ರಗಳಲ್ಲಿ ಮಂಡ್ಯದಲ್ಲಿ ಅತಿ ಹೆಚ್ಚು ಮತದಾನ ಆಗಿದೆ. ಹೀಗಾಗಿ ನನ್ನ ಗೆಲುವಿನ ಅಂತರ ಹೆಚ್ಚಾಗಿರುತ್ತದೆ ಎಂದರು.

ಲೋಕಸಭಾ ಚುನಾವಣೆ 2024: ಬೆಂಗಳೂರಿನ 3 ಕ್ಷೇತ್ರಗಳಲ್ಲಿ ‘ಮತದಾನದ’ ಪ್ರಮಾಣ ಇಳಿಕೆ

BREAKING: ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ | Arvinder Singh Lovely resigns

Share. Facebook Twitter LinkedIn WhatsApp Email

Related Posts

ಸಾಗರದ ಉಳ್ಳೂರು ಬಳಿಯಲ್ಲಿ ಭೀಕರ ಅಪಘಾತ: ಅಕ್ಷಯ ಬ್ಯಾಂಕ್ ಸಿಬ್ಬಂದಿ, ಮತ್ತೋರ್ವ ಸ್ಥಳದಲ್ಲೇ ಸಾವು

02/02/2026 4:16 PM2 Mins Read

ಜಾಗೃತಿ ಶಿಕ್ಷಣವೇ ಮಕ್ಕಳಿಗೆ ಪೂರಕ; ‘ಸೋಶಿಯಲ್ ಮೀಡಿಯಾ’ ಬಗ್ಗೆ ಶಾಲಾ ಮಟ್ಟದಲ್ಲಿ ಪಠ್ಯಕ್ರಮಕ್ಕೆ ಕಾಂಗ್ರೆಸ್ ಕಾನೂನು ಘಟಕ ಸಲಹೆ

02/02/2026 3:56 PM3 Mins Read

ಬೆಂಗಳೂರಲ್ಲಿ ಕ್ಲಾಸಿಕ್ ಲೆಜೆಂಡ್ಸ್ ರಾಷ್ಟ್ರೀಯ ತರಬೇತಿ ಕೇಂದ್ರ ಉದ್ಘಾಟನೆ

02/02/2026 3:51 PM1 Min Read
Recent News

BREAKING : ವಿನ್ಜೊ ಸೇರಿ ಇತರ ವ್ಯಾಪಾರಿಗಳ ವಿರುದ್ಧದ ಹಣ ವರ್ಗಾವಣೆ ಪ್ರಕರಣ ; ‘ಫೋನ್ ಪೇ’ಗೆ ‘ED’ ಸಮನ್ಸ್!

02/02/2026 5:25 PM

ಹೊಸ ‘ಲಗೇಜ್ ನಿಯಮ’ಗಳ ಅಡಿಯಲ್ಲಿ ನೀವು ವಿದೇಶದಿಂದ ಎಷ್ಟು ‘ಚಿನ್ನಾಭರಣ’ ಸುಂಕ ರಹಿತವಾಗಿ ತರಬಹುದು ಗೊತ್ತಾ.?

02/02/2026 5:08 PM

ಎದ್ದು ನಿಂತು ಕೂಡಲೆ ತಲೆ ತಿರುಗಿದಂತೆ ಅನಿಸ್ತಿದ್ಯಾ.? ಇದು ಯಾವ ರೋಗದ ಲಕ್ಷಣ ಗೊತ್ತಾ.?

02/02/2026 4:57 PM

‘ಧರ್ಮದ ನೆಪದಲ್ಲಿ ಚೀನಾ ವಿರೋಧಿ ಚಟುವಟಿಕೆ’ : ‘ದಲೈ ಲಾಮಾ’ಗೆ ‘ಗ್ರ್ಯಾಮಿ ಪ್ರಶಸ್ತಿ’ ನೀಡುವುದಕ್ಕೆ ಚೀನಾ ವಿರೋಧ

02/02/2026 4:20 PM
State News
KARNATAKA

ಸಾಗರದ ಉಳ್ಳೂರು ಬಳಿಯಲ್ಲಿ ಭೀಕರ ಅಪಘಾತ: ಅಕ್ಷಯ ಬ್ಯಾಂಕ್ ಸಿಬ್ಬಂದಿ, ಮತ್ತೋರ್ವ ಸ್ಥಳದಲ್ಲೇ ಸಾವು

By kannadanewsnow0902/02/2026 4:16 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಉಳ್ಳೂರು ಬಳಿಯಲ್ಲಿ ಕ್ಯಾಂಟರ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸಾಗರದ ಅಕ್ಷಯ…

ಜಾಗೃತಿ ಶಿಕ್ಷಣವೇ ಮಕ್ಕಳಿಗೆ ಪೂರಕ; ‘ಸೋಶಿಯಲ್ ಮೀಡಿಯಾ’ ಬಗ್ಗೆ ಶಾಲಾ ಮಟ್ಟದಲ್ಲಿ ಪಠ್ಯಕ್ರಮಕ್ಕೆ ಕಾಂಗ್ರೆಸ್ ಕಾನೂನು ಘಟಕ ಸಲಹೆ

02/02/2026 3:56 PM

ಬೆಂಗಳೂರಲ್ಲಿ ಕ್ಲಾಸಿಕ್ ಲೆಜೆಂಡ್ಸ್ ರಾಷ್ಟ್ರೀಯ ತರಬೇತಿ ಕೇಂದ್ರ ಉದ್ಘಾಟನೆ

02/02/2026 3:51 PM

BREAKING: ಬೆಂಗಳೂರಲ್ಲಿ 4ನೇ ಮಹಡಿಯಿಂದ ಬಿದ್ದು ಯುವಕ ಸಾವು

02/02/2026 3:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.