ಬೆಂಗಳೂರು : ಬೆಂಗಳೂರಲ್ಲಿ ಕಾಲೇಜು ವಿದ್ಯಾರ್ಥಿಗಳು, ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರು, ಮಧ್ಯಮ ವರ್ಗದ ಕಾರ್ಮಿಕರು, ಮಹಿಳೆಯರು ಸೇರಿದಂತೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಆಟೋ ಬಸ್ ಬಿಟ್ಟು ಮೆಟ್ರೋ ಟ್ರೈನ್ ನಲ್ಲಿ ಪ್ರಯಾಣಿಸುತ್ತಾರೆ. ಆದರೆ ಪೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಎಷ್ಟು? ಮೆಟ್ರೋ ಕೆ ಇದರಿಂದ ಬರುವ ಮಾಸಿಕ ಆದಾಯವೆಷ್ಟು? ಬನ್ನಿ ಇಲ್ಲಿ ತಿಳಿಯೋಣ
ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋದಲ್ಲಿ ಮಾಸಿಕ 2 ಕೋಟಿಗಿಂತ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ್ದು, ₹55 ಕೋಟಿ ಆದಾಯ ಗಳಿಸಿ ಸಾಧನೆ ಮಾಡಿದೆ. ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 6.88 ಲಕ್ಷ ತಲುಪಿದ್ದು, 2023ರ ಜನವರಿಗೆ ಹೋಲಿಸಿದರೆ ಶೇ. 30ರಷ್ಟು ಏರಿಕೆಯಾಗಿದೆ.
2023ರ ಅಕ್ಟೋಬರ್ನಲ್ಲಿ ನೇರಳೆ ಮಾರ್ಗ ಪೂರ್ಣಗೊಂಡಿದ್ದರೂ 2 ತಿಂಗಳು ಹೇಳಿಕೊ ಳ್ಳುವಂತಹ ಆದಾಯ ಬಿಎಂಆರ್ಸಿಎಲ್ಗೆ ಬಂದಿರಲಿಲ್ಲ. ಪ್ರಸ್ತುತ ಕೂಡ ನಮ್ಮ ಮೆಟ್ರೋ ನಿರೀಕ್ಷೆಯಂತೆ ನಿತ್ಯ 7 ಲಕ್ಷ ಸರಾಸರಿ ಪ್ರಯಾ ಣಿಕರಿಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.
ಆದರೆ, ಕ್ರಿಸ್ಮಸ್, ಹೊಸ ವರ್ಷ ಕಾರಣ ಡಿಸೆಂಬರ್ನಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಒಟ್ಟು 2,13,34,076 ಜನ ಮೆಟ್ರೋ ಬಳಸಿದ್ದು ಈವರೆಗಿನ ದಾಖಲೆ ಯಾಗಿದೆ. ದಿನಕ್ಕೆ ಸರಾಸರಿ 6,88,196 ಪ್ರಯಾಣಿಕರು ಸಂಚರಿಸಿದ್ದಾರೆ. ಡಿ.31ರಂದು6.26 ಲಕ್ಷ ಜನ ಸಂಚರಿಸಿದ್ದು, ಅಂದು ಒಂದೇ ದಿನ ಬರೊಬ್ಬರಿ 1.64 ಕೋಟಿ ಆದಾಯ ಬಂದಿತ್ತು. ಜನವರಿಯಲ್ಲಿ ದೈನಂದಿನ ಸಂಚಾರ 7 ಲಕ್ಷ ತಲುಪುವ ಸಾಧ್ಯತೆಯಿದೆ.
ಕಳೆದ ವರ್ಷ ಜನವರಿಯಲ್ಲಿ ಮಾಸಿಕ ಸರಾ ಸರಿ ಪ್ರಯಾಣಿಕರ ಸಂಖ್ಯೆ 5.30 ಲಕ್ಷವಿತ್ತು. 3 64 ಸಾವಿರದಷ್ಟು ಹೆಚ್ಚಿನ ಜನತೆ ಪ್ರತಿದಿನ ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ. ಅಕ್ಟೋಬ ರ್ನಲ್ಲಿ ನೇರಳೆ ಮಾರ್ಗ ಬೈಯಪ್ಪನಹಳ್ಳಿ-ಕೆ. ಆರ್.ಪುರ (2.1ಕಿ.ಮೀ.), ಕೆಂಗೇರಿ- ಚಲ್ಲ ಘಟ್ಟ (2.05 ಕಿ.ಮೀ.) ವಿಸ್ತರಣೆಗೊಂಡು ಸಂಚಾರ ಆರಂಭಿಸಿದಾಗ 75000-1 ಲಕ್ಷ ಪ್ರಯಾಣಿಕರು ಹೆಚ್ಚುವ ನಿರೀಕ್ಷೆ ಇತ್ತು. ಆದರೆ, ಬೋಗಿ ಕೊರತೆಯಿಂದ ಸಾಧ್ಯವಾಗಿಲ್ಲ.