ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪ್ರತಿಪಕ್ಷಗಳ ಪ್ರಸ್ತುತ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಕಾಂಗ್ರೆಸ್ನಲ್ಲಿ ರದ್ದುಗೊಳಿಸುವ ಸಂಸ್ಕೃತಿ ಇದೆ, ಅದು ಕೇಂದ್ರವು ಕೈಗೊಂಡ ಪ್ರತಿಯೊಂದು ಉಪಕ್ರಮವನ್ನು ರದ್ದುಗೊಳಿಸುತ್ತಿದೆ ಎಂದು ಅವರು ಹೇಳಿದರು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಅಮೆರಿಕನ್ನರು ಮತ್ತು ಚೀನಾದ ಜನರು ಮಾಡಿದಷ್ಟು ಕಷ್ಟಪಟ್ಟು ಭಾರತೀಯರು ಕೆಲಸ ಮಾಡುವುದಿಲ್ಲ ಎಂದು ಅವರು ಒಮ್ಮೆ ಹೇಳಿದ್ದರು. ಭಾರತೀಯರು ಕಷ್ಟಗಳಿಂದ ಓಡಿಹೋದರು ಎಂದು ಹೇಳಿದ ಇಂದಿರಾ ಗಾಂಧಿ ಕೂಡ ಹಿಂದೆ ಬಿದ್ದಿಲ್ಲ ಎಂದು ಅವರು ಹೇಳಿದರು.
ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ‘ವಂದನಾ ನಿರ್ಣಯ’ಕ್ಕೆ ಉತ್ತರಿಸಿದ ಮೋದಿ, ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಪ್ರತ್ಯೇಕ ರಾಷ್ಟ್ರ ಮಾತಿಗೆ ಟಾಂಗ್ ನೀಡಿದರು. ಒಬ್ಬ ಕಾಂಗ್ರೆಸ್ ಸಂಸದ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡುತ್ತಿದ್ದಾರೆ. ದೇಶವನ್ನು ಒಡೆದ ಮೇಲೂ ನಿಮಗೆ ತೃಪ್ತಿ ಇಲ್ಲವೇ ಎಂದು ಪ್ರದಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಇನ್ನೂ “ಜಗತ್ತು ಭಾರತದಿಂದ ಪ್ರಭಾವಿತವಾಗಿದೆ. ಜಿ 20 ಶೃಂಗಸಭೆ ಇದಕ್ಕೆ ಸಾಕ್ಷಿಯಾಗಿದೆ. ನಮ್ಮ ಮೂರನೇ ಅವಧಿಯಲ್ಲಿ… ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಇದು ಮೋದಿಯವರ ಗ್ಯಾರಂಟಿ’ ಎಂದು ಪ್ರಧಾನಿ ಹೇಳಿದರು.
#WATCH | PM Modi in Parliament slams Congress MP DK Suresh on his 'separate nation' remark pic.twitter.com/Kv5Rq9PGD5
— ANI (@ANI) February 5, 2024