ಬೆಂಗಳೂರು : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಇವುಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು, ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ 2,000 ರೂಪಾಯಿ ಹಾಕಲಾಗುತ್ತಿದೆ.
ಈಗಾಗಲೇ ಗೃಹಲಕ್ಷ್ಮೀಯರ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇನ್ನು 22ನೇ ಕಂತಿನ ಹಣವನ್ನು ನಾಳೆ ಆಗಸ್ಟ್ 27ರ ಗಣೇಶ ಹಬ್ಬದಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಯಾಕಂದ್ರೆ 21ನೇ ಕಂತಿನ ಹಣವನ್ನು ವರಮಹಾಲಕ್ಷ್ಮೀ ಹಬ್ಬದಂದೇ ಹಾಕಲಾಗಿತ್ತು. ಇನ್ನು 23 ಹಾಗೂ 24ನೇ ಕಂತಿನ ಹಣ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ಪ್ರಶ್ನೆಯಾಗಿದೆ. ಇದಕ್ಕೂ ಮುಂಚೆ ಯಾರಿಗೆಲ್ಲಾ ಎಷ್ಟು ಕಂತಿನ ಹಣ ಬಂದಿದೆ ಎನ್ನುವ ಮಹತ್ವದ ಮಾಹಿತಿಯನ್ನು ತಿಳಿಯುವುದೇಗೆ ಎಂದು ಇಲ್ಲಿ ನೀಡಲಾಗಿದೆ.
ಪ್ರಸ್ತುತ ಈ ಯೋಜನೆ ಅಡಿಯಲ್ಲ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ಅರ್ಹರ ಫಲಾನುಭವಿಗಳ ಖಾತೆಗೆ ಆಗಸ್ಟ್ 14ರಿಂದ 20ರ ಮಧ್ಯದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗೆ ಹಣವನ್ನು ನೆರ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ.
2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು ಮೂರು ಬಾರಿ ಅರ್ಹ ಫಲಾನುಭವಿ ಮಹಿಳೆಯರಿಗೆ ಈ ಯೋಜನೆಯಡಿ ತಲಾ 2,000 ರೂಪಾಯಿ ಹಣವನ್ನು ಮಾಡಲಾಗಿದೆ. ಮೊದಲನೇ ಕಂತು 19 ಮೇ 2025, ಎರಡನೇ ಕಂತು- 9 ಜೂನ್ 2025, ಮೂರನೇ ಕಂತು – 14 ಆಗಸ್ಟ್ 2025 ರಂದು ಬಿಡುಗಡೆ ಮಾಡಲಾಗಿದೆ.
ಇನ್ನು ತಮ್ಮ ಖಾತೆಗೆ ಎಷ್ಟು ಬಾರಿ ಹಣ ಜಮೆಯಾಗಿದೆ. ಇನ್ನೂ ಎಷ್ಟು ಬಾರಿ ಜಮೆಯಾಗಬೇಕು ಎಂದು ಖಚಿತಪಡಿಸಿಕೊಳ್ಳಲು ಬ್ಯಾಂಕ್‌ಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಬದಲಾಗಿ ನಿಮ್ಮ ಮೊಬೈಲ್‌ನಲ್ಲೇ ಹಣ ಜಮೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ಎಲ್ಲಾ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಪ್ರಸ್ತುತ ಎಷ್ಟು ಹಣ ಇದೆ ಎಂದು ತಮ್ಮ ಮೊಬೈಲ್‌ನಲ್ಲಿ ಬ್ಯಾಂಕ್‌ನ ಸಹಾಯವಾಣಿಗೆ ಮಿಸ್ಡ್ ಕಾಲ್ ನೀಡಿ ಮಾಹಿತಿಯನ್ನು ಪಡೆಯಬಹುದು.
* ಮೊದಲಿಗೆ ಗೂಗಲ್ ಪ್ಲೈ ಸ್ಟೋರ್‌ನಲ್ಲಿ ಇ-ಆಡಳಿತ ಇಲಾಖೆಯ ಅಧಿಕೃತ DBT Karnataka ಅನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.
* ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ನಿಮ್ಮ 12 ಅಂಕಿಯ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ.
* Get OTP ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಪಡೆದುಕೊಂಡ ಬಳಿಕ ಅದನ್ನು ನಮೂದಿಸಿ. ಈ ಅಪ್ಲಿಕೇಶನ್ ಅನ್ನು ಬಳಕೆ ಮಾಡಲು ನಾಲ್ಕು ಅಂಕಿಯ ಪಾಸ್‌ವರ್ಡ್ ಅನ್ನು ರಚನೆ ಮಾಡಿಕೊಂಡು ಲಾಗ್ ಇನ್ ಬಟನ್ ಮೇಲೆ ಕ್ಲಿಕ್ಕ್ ಮಾಡಿ. ನೀವು ರಚನೆ ಮಾಡಿಕೊಂಡಿರುವ ಪಾಸ್‌ವರ್ಡ್ ಅನ್ನು ಹಾಕಿ ಅಪ್ಲಿಕೇಶನ್‌ಗೆ ಲಾಗಿ ಇನ್ ಅಗಬೇಕು.
* ಬಳಿಕ ಮುಖಪುಟದಲ್ಲಿ Payment Status ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣುವ ಗೃಹಲಕ್ಷ್ಮೀ ಬಟನ್ ಮೇಲೆ ಕ್ಲಿಕ್ ಮಾಡಿದರೆ, ಇಲ್ಲಿಯವರೆಗೆ ಈ ಯೋಜನೆ ಅಡಿ ಎಷ್ಟು ಕಂತಿನ ಹಣ ಜಮಾ ಅಗಿದೆ ಎಂದು ಸಂಪೂರ್ನ ವಿವರವನ್ನು ಪಡೆಯಬಹುದಾಗಿದೆ.