ರಾಯಚೂರು : ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದ್ದು, ಅತಿಯೇ ತನ್ನ ಪತ್ನಿಯ ಕೊಲೆ ಮಾಡಿರುವ ಸಂಖ್ಯೆ ವ್ಯಕ್ತವಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅರಗಿನಮರ ಎಂಬಲ್ಲಿ ನಡೆದಿದೆ.
ಇನ್ನು ಮೃತ ಗೃಹಿಣಿಯನ್ನು ಲಿಪಿ ಸರ್ಕಾರ್ (23) ಎಂದು ತಿಳಿದುಬಂದಿದೆ. ಈಕೆ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಕಳೆದ ಕೆಲವು ವರ್ಷಗಳ ಹಿಂದೆ ಲಿಪಿ ಸರ್ಕಾರ ಮಂಜುನಾಥ್ ಎನ್ನುವ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು.
ಆದರೆ ಮಂಜುನಾಥ್ ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ.
ಈ ಹಿನ್ನೆಲೆಯಲ್ಲಿ ಮದುವೆಯಾದ ಬಳಿಕ ದಿನವೂ ಕುಡಿದು ಬಂದು ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಸದ್ಯ ರಿಮ್ಸ್ ಆಸ್ಪತ್ರೆಗೆ ಮೃತ ಲಿಪಿ ಸರ್ಕಾರ್ ಮೃತದೇಹವನ್ನು ರವನಿಸಲಾಗಿದೆ. ಘಟನೆ ಹಿನ್ನೆಲೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಪತಿ ಮಂಜುನಾಥ ವಿರುದ್ಧ ಕೇಸ್ ದಾಖಲಾಗಿದೆ.