ಹೈದರಾಬಾದ್: ಹೆಚ್ಚುವರಿ ವರದಕ್ಷಿಣೆ ತರಲು ವಿಫಲವಾದರೆ, ತನ್ನ ಸ್ನೇಹಿತನೊಂದಿಗೆ ಮಲಗಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ತನ್ನ ಪತಿ ಮತ್ತು ಅತ್ತೆಯ ವಿರುದ್ಧ 27 ವರ್ಷದ ಮಹಿಳೆ ಶಂಶಾಬಾದ್ ಪೊಲೀಸರಿಗೆ ದೂರು ನೀಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಏನಿದು ಪ್ರಕರಣ?
ದೂರುದಾರ ಮಹಿಳೆ 2016ರಲ್ಲಿ ವಿವಾಹವಾದದರು. ಈ ವೇಳೆ ಆಕೆಯ ಪೋಷಕರು 5 ಲಕ್ಷ ರೂ. ಹಣ ಮತ್ತು ಒಂಬತ್ತು ತೊಲ ಬಂಗಾರವನ್ನು ಸಹ ನೀಡಿದ್ದರು. ಮದುವೆ ನಂತ್ರ ಪತಿ ಕೆಲಸ ಬಿಟ್ಟಿದ್ದು, ಮದ್ಯವ್ಯಸನಿಯಾಗಿದ್ದಾನೆ. ಇದಕ್ಕಾಗಿ ಹೆಚ್ಚಿನ ಹಣ ಬೇಕಾದ ಕಾರಣ ಪತ್ನಿಗೆ ಹಣಕ್ಕಾಗಿ ಕಿರುಕುಳ ನೀಡಲಾರಂಭಿಸಿದ್ದು, ಪೋಷಕರ ಬಳಿಯಿಂದ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದಾನೆ. ಇಲ್ಲದಿದ್ರೆ, ತನ್ನ ಸ್ನೇಹಿತನೊಂದಿಗೆ ಮಲಗಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.
ಅಷ್ಟೇ ಅಲ್ಲದೇ, ಪತ್ನಿ ಜತೆಗಿನ ಕೆಲವು ಆತ್ಮೀಯ ವಿಡಿಯೋಗಳನ್ನು ಸ್ನೇಹಿತರಿಗೆ ಕಳುಹಿಸಿದ್ದಾನೆ. ಇದಕ್ಕೆ ಒಪ್ಪಿಗೆ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಅತ್ತೆಗೆ ತಿಳಿಸಿದಾಗ, ಆಕೆಯೂ ಕೂಡ ಮಗ ಹೇಳಿದಂತೆ ಕೇಳುವಂತೆ ಜವಾಬು ಹಾಕಿದ್ದಾಳೆ.
ಈ ಕಿರುಕುಳದಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಪತಿ ವಿರುದ್ಧ ವರದಕ್ಷಿಣೆ ತಡೆ ಕಾಯ್ದೆ, ಕೌಟುಂಬಿಕ ದೌರ್ಜನ್ಯ ಮತ್ತು ಬ್ಲಾಕ್ಮೇಲಿಂಗ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
Good News : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
Shocking: ʻಅವನೊಂದಿಗೆʼ ಸ್ಕೂಟರ್ನಲ್ಲಿ ತಿರುಗಾಡುತ್ತಿದ್ದಕ್ಕೆ ಪತಿಗೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿದ ಪತ್ನಿ!