ಬೆಂಗಳೂರು : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೀರ್ತಿ ಶವ ಪತ್ತೆಯಾಗಿದೆ.
2023 ನವೆಂಬರ್ ನಲ್ಲಿ ಕೀರ್ತಿ ಗುರುಪ್ರಸಾದ್ ಮದುವೆಯಾಗಿತ್ತು. ಕೀರ್ತಿ ಪೋಷಕರು ಸುಮಾರು 30 ರಿಂದ 35 ಲಕ್ಷ ಹಣ ಖರ್ಚು ಮಾಡಿ ಮದುವೆ ಮಾಡಲಾಗಿತ್ತು. ಡಿಸೆಂಬರ್ 2025ರಲ್ಲಿ ಮತ್ತೆ 10 ಲಕ್ಷ ಹಣ ಗುರುಪ್ರಸಾದ್ ಕೇಳಿದ್ದ. ಮನೆ ಕಟ್ಟಿಸುವುದಾಗಿ ಹಣ ಕೊಡಿ ಎಂದು ಗುರುಪ್ರಸಾದ್ ಕೇಳಿದ್ದ. ಈ ವೇಳೆ ಗುರುಪ್ರಸಾದ್ ಗೆ ಕೀರ್ತಿ ಪೋಷಕರು 8 ಲಕ್ಷ ಹಣ ನೀಡಿದ್ದರು. ನಿನ್ನೆ ಬೆಳಿಗ್ಗೆ ಯಡಿಯೂರು ಕೆರೆ ಬಳಿ ಮನೆಯಲ್ಲಿ ಕೀರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಪತಿ ಗುರುಪ್ರಸಾದ್ ಆಸ್ಪತ್ರೆಗೆ ಸೇರಿಸಿದ್ದೇನೆ ಎಂದು ಪೋಷಕರಿಗೆ ಮಾಹಿತಿ ನೀಡಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗಿದ್ದು, ಪೋಷಕರು ಶವ ಗ್ರಾಮಕ್ಕೆ ಕೀರ್ತಿ ಮೃತದೇಹ ತೆಗೆದುಕೊಂಡು ಹೋಗಿದ್ದಾರೆ. ಪತಿ ಗುರುಪ್ರಸಾದ್ ಹಾಗೂ ಕುಟುಂಬದ ವಿರುದ್ಧ ಕೇಸ್ ದಾಖಲಿಸಲಾಗಿದೆ. ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.








