ತಮಿಳುನಾಡು: ಇಲ್ಲಿನ ಕೊಯಮತ್ತೂರಿನಲ್ಲಿ ಅಪರ್ಮೆಂಟ್ ಒಂದರ 4ನೇ ಮಹಡಿಯಿಂದ ಬಿದ್ದಿದ್ದಂತ ಮಗುವನ್ನು ಸ್ಥಳೀಯ ನಿವಾಸಿಗಳೇ ರಕ್ಷಣೆ ಮಾಡಿದ್ದರು. ಈ ರಕ್ಷಣೆಯ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಟೀಕೆಯಿಂದ ಮನನೊಂದು ಮಗುವಿನ ತಾಯಿ ನೇಣಿಗೆ ಶರಣಾಗಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿರುವಂತ ಅಪಾರ್ಮೆಂಟ್ ಒಂದರ 4ನೇ ಮಹಡಿಯಿಂದ ದಿನಾಂಕ 28-04-2024ರಂದು ಮಗು ಕೆಳಗೆ ಬಿದ್ದಿತ್ತು. ಕಿಟಕಿಯ ಮೇಲೆ ಬಿದ್ದಿದ್ದಂತ ಮಗುವನ್ನು ರಕ್ಷಣೆ ಮಾಡಲಾಗಿತ್ತು. ಹೀಗೆ ಅಪಾರ್ಮೆಂಟ್ ನಿವಾಸಿಗಳು ಮಗುವನ್ನು ರಕ್ಷಣೆ ಮಾಡುತ್ತಿದ್ದಂತ ವೀಡಿಯೋ ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ನೋಡಿದಂತ ನೆಟ್ಟಿಗರು ಮಗುವ ಹೀಗೆ ಕೆಳಗೆ ಬೀಳೋದಕ್ಕೆ ತಾಯಿಯ ನಿರ್ಲಕ್ಷ್ಯವೇ ಕಾರಣ. ತಾಯಿ ಅಜಾಗರೂಕತೆಯನ್ನು ಮಗುವಿನ ಬಗ್ಗೆ ತೋರಿದ್ದಾಳೆ. ಮಗುವಿನ ಬಗ್ಗೆ ಕಣ್ಣಿಟ್ಟಿದ್ದರೇ ಇಂತಹ ಅನಾಹುತ ನಡೆಯುತ್ತಿರಲಿಲ್ಲ. ಹಾಗೆ ಹೀಗೆ ಅಂತ ಟೀಕೆ ಮಾಡಿದ್ದರು.
ವೈರಲ್ ವೀಡಿಯೋಗಳಿಗೆ ಬಂದಂತ ಟೀಕೆಗಳನ್ನು ಗಮನಿಸಿದಂತ ಮಗುವಿನ ತಾಯಿ ರಮ್ಯಾ ಇಂದು ತಮಿಳುನಾಡಿ ಕೊಯಮತ್ತೂರಲ್ಲಿ ತಮ್ಮ ನಿವಾಸದಲ್ಲಿ ಮನನೊಂದು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
BREAKING : ʻಹೊಸ ಕ್ರಿಮಿನಲ್ ಕಾನೂನುʼಗಳ ವಿರುದ್ಧದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್
ರೈತರಿಗೆ ಕೃಷಿ ಇಲಾಖೆಯಿಂದ ಮಹತ್ವದ ಮಾಹಿತಿ : ʻಬಿತ್ತನೆ ಬೀಜʼಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸುವಂತೆ ಸೂಚನೆ