ಬೀದರ್ : ಬೀದರ್ ನಲ್ಲಿ ಭೀಕರ ಅಗ್ನಿ ದುರಂತವೊಂದು ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆ ಒಂದು ಸಂಪೂರ್ಣವಾಗಿ ಹೊತ್ತಿ ಉರಿದಿರುವ ಘಟನೆ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ದೇವೇಂದ್ರ ವೈಜ್ಯನಾಥ್ ಎಂಬುವರ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿ ಆಗಿದೆ. ಅವಘಡದಲ್ಲಿ ಗೃಹ ಉಪಯೋಗಿ ವಸ್ತುಗಳು ಸುಟ್ಟು ಬಸ್ಮವಾಗಿವೆ. ಕುಟುಂಬದವರು ಹೊಲಕ್ಕೆ ಹೋಗಿದ್ದಾಗ ಶಾರ್ಟ್ ಸರ್ಕ್ಯೂಟ್ ನಿಂದ ಈ ಒಂದು ಅಗ್ನಿ ಅವಘಡ ಸಂಭವಿಸಿದೆ.








