Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶ್ರೀರಂಗಪಟ್ಟಣ ಭೂ ಅಕ್ರಮದ ಹಿಂದೆ ಇರುವ ಆ ‘ಪ್ರಭಾವಿ’ ಸಚಿವ ಯಾರು?: ಜೆಡಿಎಸ್ ಪ್ರಶ್ನೆ

23/03/2026 3:06 PM

ಅಡುಗೆ ಅನಿಲ ಅಭಾವ: ಹೋಟೆಲ್ ಉದ್ಯಮಿಗಳ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೆಲವೇ ಕ್ಷಣದಲ್ಲಿ ತೀರ್ಪು

23/03/2026 3:04 PM

ರಾಜ್ಯದಲ್ಲಿ ಗ್ಯಾಸ್ ಕೊರತೆಯಿಂದ ಹೊಟೇಲ್‌ಗಳು ಬಂದ್‌; ಮೀನು ವ್ಯಾಪಾರಕ್ಕೆ ಭಾರೀ ಹೊಡೆತ!

23/03/2026 2:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಗ್ಯಾಸ್ ಕೊರತೆಯಿಂದ ಹೊಟೇಲ್‌ಗಳು ಬಂದ್‌; ಮೀನು ವ್ಯಾಪಾರಕ್ಕೆ ಭಾರೀ ಹೊಡೆತ!
KARNATAKA

ರಾಜ್ಯದಲ್ಲಿ ಗ್ಯಾಸ್ ಕೊರತೆಯಿಂದ ಹೊಟೇಲ್‌ಗಳು ಬಂದ್‌; ಮೀನು ವ್ಯಾಪಾರಕ್ಕೆ ಭಾರೀ ಹೊಡೆತ!

By kannadanewsnow0923/03/2026 2:58 PM

ಉಡುಪಿ/ಮಲ್ಪೆ: ರಾಜ್ಯದಲ್ಲಿ ತಲೆದೋರಿರುವ ವಾಣಿಜ್ಯ ಅಡುಗೆ ಅನಿಲ (Commercial LPG) ಕೊರತೆಯು ಕರಾವಳಿಯ ಆರ್ಥಿಕತೆಯ ಬೆನ್ನೆಲುಬಾಗಿರುವ ಮೀನುಗಾರಿಕೆ ಮತ್ತು ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದೆ. ಗ್ಯಾಸ್ ಅಭಾವದಿಂದಾಗಿ ಒಂದೆಡೆ ಮೀನುಗಾರರು ಸಮುದ್ರಕ್ಕೆ ಇಳಿಯಲು ಪರದಾಡುತ್ತಿದ್ದರೆ, ಇನ್ನೊಂದೆಡೆ ಮೀನು ಉಟದ ಹೋಟೆಲ್‌ಗಳು ಮುಚ್ಚುತ್ತಿರುವುದು ಮೀನು ಮಾರಾಟಗಾರರನ್ನು ಕಂಗಾಲಾಗಿಸಿದೆ.

ಮೀನುಗಾರಿಕೆ ಮತ್ತು ಮಾರುಕಟ್ಟೆ ಮೇಲೆ ಎಫೆಕ್ಟ್:

ಗ್ಯಾಸ್ ಸಿಲಿಂಡರ್‌ಗಳ ಕೊರತೆಯಿಂದಾಗಿ ಕರಾವಳಿಯ ಬಹುತೇಕ ಮೀನು ಊಟದ ಹೋಟೆಲ್‌ಗಳು ಬಾಗಿಲು ಹಾಕಿವೆ. ಇದರಿಂದಾಗಿ ಪ್ರತಿದಿನ ಟನ್‌ಗಟ್ಟಲೆ ಮೀನು ಖರೀದಿಸುತ್ತಿದ್ದ ಹೋಟೆಲ್ ಮಾಲೀಕರು ಮಾರುಕಟ್ಟೆಯತ್ತ ಬರುತ್ತಿಲ್ಲ. ಇದರ ನೇರ ಪರಿಣಾಮ ಮೀನು ಮಾರಾಟ ಮಾಡುವ ಮಹಿಳೆಯರ ಮೇಲೆ ಬೀರಿದ್ದು, ವ್ಯಾಪಾರವಿಲ್ಲದೆ ಅವರು ಕಣ್ಣೀರು ಹಾಕುವಂತಾಗಿದೆ.

  • ದರ ಇಳಿಕೆ: ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ದುಬಾರಿ ಮೀನುಗಳ ದರ ಸುಮಾರು 100 ರಿಂದ 150 ರೂಪಾಯಿಗಳಷ್ಟು ಇಳಿಕೆಯಾಗಿದೆ.

  • ವ್ಯಾಪಾರ ಕುಂಠಿತ: “ರಖಂ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಶೇ. 40ರಷ್ಟು ವ್ಯವಹಾರ ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮೀನುಗಾರರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ” ಎಂದು ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್ ಆತಂಕ ವ್ಯಕ್ತಪಡಿಸಿದ್ದಾರೆ.

ರಫ್ತು ಉದ್ಯಮಕ್ಕೂ ಗ್ರಹಣ:

ಯುದ್ಧದ ಪರಿಣಾಮದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಸಂಚಾರ ಸ್ಥಗಿತಗೊಂಡಿರುವುದು ರಫ್ತು ಉದ್ಯಮಕ್ಕೂ ಹೊಡೆತ ನೀಡಿದೆ. “ಹಡಗು ಮತ್ತು ಕಂಟೈನರ್‌ಗಳು ಬಾರದ ಕಾರಣ ಸೀಗಡಿ, ಅಂಜಲ್, ಪಾಂಫ್ರೆಟ್ ಮತ್ತು ಬೊಂಡಾಸ್‌ಗಳ ರಫ್ತು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೀತಲೀಕರಣ ಘಟಕಗಳಲ್ಲಿ ಮೀನುಗಳು ಸಂಗ್ರಹವಾಗುತ್ತಿವೆ” ಎಂದು ಮೀನು ವ್ಯಾಪಾರಸ್ಥರಾದ ವಿನಯ ಕರ್ಕೇರಾ ತಿಳಿಸಿದ್ದಾರೆ.

ಬುಕ್ಕಿಂಗ್ ಆದರೂ ಸಿಗದ ಸಿಲಿಂಡರ್:

ಇತ್ತ ಗ್ರಾಹಕರ ಸ್ಥಿತಿಯೂ ಭಿನ್ನವಾಗಿಲ್ಲ. ಹಿಂದೆ ಬುಕ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಿಗುತ್ತಿದ್ದ ಸಿಲಿಂಡರ್ ಈಗ 15 ದಿನ ಕಳೆದರೂ ಕೈಸೇರುತ್ತಿಲ್ಲ.

  • ಹಾವೇರಿ ಸೇರಿದಂತೆ ಹಲವೆಡೆ ಮೊಬೈಲ್ ಕರೆಗಳ ಮೂಲಕ ಬುಕ್ಕಿಂಗ್ ಪ್ರಕ್ರಿಯೆಯೂ ಸರಿಯಾಗಿ ನಡೆಯುತ್ತಿಲ್ಲ.

  • ಒಂದೇ ಸಿಲಿಂಡರ್ ಹೊಂದಿರುವ ಕುಟುಂಬಗಳು ಅಡುಗೆ ಮಾಡಲು ಸಾಧ್ಯವಾಗದೆ ಕಷ್ಟಪಡುತ್ತಿವೆ.

ಏಜೆನ್ಸಿಗಳ ಅಳಲು:

ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿದೆ ಎನ್ನುತ್ತಿದ್ದಾರೆ ಗ್ಯಾಸ್ ಏಜೆನ್ಸಿ ಮಾಲೀಕರು. “ಒಂದೇ ದಿನ 9,000 ಸಿಲಿಂಡರ್‌ಗಳು ಬುಕ್ ಆಗುತ್ತಿವೆ, ಆದರೆ ನಮಗೆ ಪೂರೈಕೆಯಾಗುತ್ತಿರುವುದು ದಿನಕ್ಕೆ ಕೇವಲ 1,000 ಸಿಲಿಂಡರ್ ಮಾತ್ರ. ಸಿಲಿಂಡರ್ ಸಿಗುವುದಿಲ್ಲ ಎಂಬ ಭೀತಿಯಿಂದ ಅವಶ್ಯಕತೆ ಇಲ್ಲದವರೂ ಬುಕ್ ಮಾಡುತ್ತಿರುವುದು ಬಿಕ್ಕಟ್ಟು ಹೆಚ್ಚಾಗಲು ಕಾರಣವಾಗಿದೆ” ಎಂದು ಅವರು ಹೇಳುತ್ತಿದ್ದಾರೆ.

ಒಟ್ಟಾರೆಯಾಗಿ, ಇಂಧನ ಬಿಕ್ಕಟ್ಟು ಕರಾವಳಿಯ ಹೋಟೆಲ್ ಉದ್ಯಮದಿಂದ ಹಿಡಿದು ಸಾಮಾನ್ಯ ಜನರ ಅಡುಗೆ ಮನೆಯವರೆಗೆ ವ್ಯಾಪಕ ತಲ್ಲಣ ಸೃಷ್ಟಿಸಿದೆ.

ರಾಜ್ಯದ ಹೋಟೆಲ್ ಮಾಲೀಕರಿಗೆ ಸಚಿವ ಕೆ.ಹೆಚ್ ಮುನಿಯಪ್ಪ ಗುಡ್ ನ್ಯೂಸ್

EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!

Share. Facebook Twitter LinkedIn WhatsApp Email

Related Posts

ಶ್ರೀರಂಗಪಟ್ಟಣ ಭೂ ಅಕ್ರಮದ ಹಿಂದೆ ಇರುವ ಆ ‘ಪ್ರಭಾವಿ’ ಸಚಿವ ಯಾರು?: ಜೆಡಿಎಸ್ ಪ್ರಶ್ನೆ

23/03/2026 3:06 PM1 Min Read

ಅಡುಗೆ ಅನಿಲ ಅಭಾವ: ಹೋಟೆಲ್ ಉದ್ಯಮಿಗಳ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೆಲವೇ ಕ್ಷಣದಲ್ಲಿ ತೀರ್ಪು

23/03/2026 3:04 PM1 Min Read

ರಾಜ್ಯದ ಹೋಟೆಲ್ ಮಾಲೀಕರಿಗೆ ಸಚಿವ ಕೆ.ಹೆಚ್ ಮುನಿಯಪ್ಪ ಗುಡ್ ನ್ಯೂಸ್

23/03/2026 2:54 PM1 Min Read
Recent News

ಶ್ರೀರಂಗಪಟ್ಟಣ ಭೂ ಅಕ್ರಮದ ಹಿಂದೆ ಇರುವ ಆ ‘ಪ್ರಭಾವಿ’ ಸಚಿವ ಯಾರು?: ಜೆಡಿಎಸ್ ಪ್ರಶ್ನೆ

23/03/2026 3:06 PM

ಅಡುಗೆ ಅನಿಲ ಅಭಾವ: ಹೋಟೆಲ್ ಉದ್ಯಮಿಗಳ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೆಲವೇ ಕ್ಷಣದಲ್ಲಿ ತೀರ್ಪು

23/03/2026 3:04 PM

ರಾಜ್ಯದಲ್ಲಿ ಗ್ಯಾಸ್ ಕೊರತೆಯಿಂದ ಹೊಟೇಲ್‌ಗಳು ಬಂದ್‌; ಮೀನು ವ್ಯಾಪಾರಕ್ಕೆ ಭಾರೀ ಹೊಡೆತ!

23/03/2026 2:58 PM

ರಾಜ್ಯದ ಹೋಟೆಲ್ ಮಾಲೀಕರಿಗೆ ಸಚಿವ ಕೆ.ಹೆಚ್ ಮುನಿಯಪ್ಪ ಗುಡ್ ನ್ಯೂಸ್

23/03/2026 2:54 PM
State News
KARNATAKA

ಶ್ರೀರಂಗಪಟ್ಟಣ ಭೂ ಅಕ್ರಮದ ಹಿಂದೆ ಇರುವ ಆ ‘ಪ್ರಭಾವಿ’ ಸಚಿವ ಯಾರು?: ಜೆಡಿಎಸ್ ಪ್ರಶ್ನೆ

By kannadanewsnow0923/03/2026 3:06 PM KARNATAKA 1 Min Read

ಬೆಂಗಳೂರು: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ ಎನ್ನಲಾದ ಭೂ ಅಕ್ರಮಗಳ ವಿಚಾರ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.…

ಅಡುಗೆ ಅನಿಲ ಅಭಾವ: ಹೋಟೆಲ್ ಉದ್ಯಮಿಗಳ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೆಲವೇ ಕ್ಷಣದಲ್ಲಿ ತೀರ್ಪು

23/03/2026 3:04 PM

ರಾಜ್ಯದಲ್ಲಿ ಗ್ಯಾಸ್ ಕೊರತೆಯಿಂದ ಹೊಟೇಲ್‌ಗಳು ಬಂದ್‌; ಮೀನು ವ್ಯಾಪಾರಕ್ಕೆ ಭಾರೀ ಹೊಡೆತ!

23/03/2026 2:58 PM

ರಾಜ್ಯದ ಹೋಟೆಲ್ ಮಾಲೀಕರಿಗೆ ಸಚಿವ ಕೆ.ಹೆಚ್ ಮುನಿಯಪ್ಪ ಗುಡ್ ನ್ಯೂಸ್

23/03/2026 2:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.