ಬೆಂಗಳೂರು: ಕಮರ್ಷಿಯಲ್ ಗ್ಯಾಸ್ಗಳಿಗೆ (Commercial Gas) ಕೊಡುತ್ತಿದ್ದ ಡಿಸ್ಕೌಂಟ್ (Discount) ಕಟ್ ಆಗಿದ್ದು ಈ ಬೆನ್ನಲ್ಲೇ ಹೊಟೇಲ್ ತಿನಿಸು ದರ ಏರಿಕೆಯಾಗುವ ಎಲ್ಲಾ ಸಾಧ್ಯತೆಯಿದೆ. ಹೋಟೆಲ್ ಬೆಲೆ ಏರಿಕೆ ಬಿಸಿ ‘ ಗ್ರಾಹಕರಿಗೆ ತಟ್ಟುತ್ತಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
BIGG NEWS : ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದವರಿಗೆ ಬಿಗ್ ಶಾಕ್!
ಈ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲೇ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗುವ ಸಾಧ್ಯತೆ ಹೆಚ್ಚಿದೆ. ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಆತಂಕ ಶುರುವಾಗಿದೆ. ಹೋಟೆಲ್ಗಳು ಬಳಸುವ ವಾಣಿಜ್ಯ ಗ್ಯಾಸ್ಗಳನ್ನು ಪೂರೈಸುತ್ತಿದ್ದ ಮೂರು ಕಂಪನಿಗಳು ಹಲವು ರಿಯಾಯತಿಯಲ್ಲಿ ಸಿಲಿಂಡರ್ಗಳನ್ನು ನೀಡುತ್ತಿದ್ದವು ಇದೀಗ ಈ ಡಿಸ್ಕೌಂಟ್ ಕಡಿತಗೊಳಿಸಿರುವ ಪರಿಣಾಮ ಗ್ರಾಹಕರಿಗೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ
BIGG NEWS : ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದವರಿಗೆ ಬಿಗ್ ಶಾಕ್!
ಈ ಹಿಂದೆ ಕಮರ್ಷಿಯಲ್ ಗ್ಯಾಸ್ಗಳಿಗೆ ಕೊಡುತ್ತಿದ್ದ ಡಿಸ್ಕೌಂಟ್ 200 ರಿಂದ 300 ರೂ. ವರೆಗೆ ಇರುತ್ತಿತ್ತು. 50ಕ್ಕಿಂತ ಹೆಚ್ಚು ಸಿಲಿಂಡರ್ಗಳನ್ನು ಪಡೆದರೆ ಒಂದು ರಿಯಾಯಿತಿ. 100ಕ್ಕೆ ಒಂದು ರಿಯಾಯಿತಿ ಹಾಗೂ 200ಕ್ಕೆ ಇನ್ನೊಂದು ರಿಯಾಯಿತಿ ಇತ್ತು. ಆದರೆ ಈಗ ಈ ಎಲ್ಲಾ ರಿಯಾಯಿತಿಗಳನ್ನು ಹಿಂಪಡೆದ ಕಾರಣ ಹೋಟೆಲ್ ಉದ್ಯಮಕ್ಕೆ ತೀವ್ರ ಹೊಡೆತ ಬೀಳಲಿದೆ. ಈಗಾಗಲೇ ಅಡುಗೆ ಎಣ್ಣೆ, ತುಪ್ಪ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದರಿಂದ ಹೋಟೆಲ್ ಆಹಾರಗಳ ದರ ಹೆಚ್ಚಳಗೊಂಡಿದೆ. ಇದೀಗ ಮತ್ತೊಮ್ಮೆ ಏರಿಕೆಯಾಗುವ ಲಕ್ಷಣ ಕಂಡುಬಂದಿದೆ
BIGG NEWS : ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದವರಿಗೆ ಬಿಗ್ ಶಾಕ್!