ಬೆಂಗಳೂರು: ಹಾಸ್ಟೆಲ್ ಹುಡುಗರು ಚಿತ್ರ ತಂಡದಿಂದ ತಮ್ಮ ಅನುಮತಿಯಿಲ್ಲದೇ ದೃಶ್ಯಾವಳಿ ಬಳಕೆ ಮಾಡಿದ್ದರ ಸಂಬಂಧ ನಟಿ ರಮ್ಯಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧದ ವಿಚಾರಣೆಗೆ ಇಂದು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಕ್ಕೆ ನಟಿ ರಮ್ಯಾ ವಿಚಾರಣೆ ಹಾಜರಾದರು.
ಜುಲೈ.21, 2024ರಂದು ನಟಿ ರಮ್ಯಾ ಅವರು ಅನುಮತಿಯಿಲ್ಲದೇ ತಮ್ಮ ದೃಶ್ಯಾವಳಿಯನ್ನು ಹಾಸ್ಟೆಲ್ ಹುಡುಗರು ಚಿತ್ರದಲ್ಲಿ ಬಳಕೆ ಮಾಡಿದ್ದರ ಕಾರಣ, ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. 1 ಕೋಟಿ ಪರಿಹಾರ ನೀಡುವಂತೆಯೂ ಅರ್ಜಿ ಸಲ್ಲಿಸಿದ್ದರು.
ಇಂದು ಬೆಂಗಳೂರಿನ ವಾಣಿಜ್ಯ ಸಂಕೀರ್ಣಗಳ ನ್ಯಾಯಾಲಯದಲ್ಲಿ ಹಾಸ್ಟೆಲ್ ಹುಡುಗರು ಚಿತ್ರದ ವಿವಾದದ ಕುರಿತಂತೆ ಕೇಸ್ ವಿಚಾರಣೆಯಿದ್ದ ಕಾರಣ, ನಟಿ ರಮ್ಯಾ ಅವರು ವಿಚಾರಣೆಗೆ ಹಾಜರಾದರು.