ಹೊಸನಗರ : ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಿದ್ದ ಮಗ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಸುಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲ್ಲುಸಾಲೆ ಎಂಬಲ್ಲಿ ನಡೆದಿದೆ.
ಹಲ್ಲುಸಾಲೆ ಗ್ರಾಮದ ಕೃಷಿಕ ತಿಮ್ಮಪ್ಪಗೌಡ (58) ಎಂಬುವವವರ ವಯೋವೃದ್ದ ತಾಯಿ ಚಿನ್ನಮ್ಮ(78) ಶನಿವಾರ ಮೃತಪಟ್ಟಿದ್ದರು. ಈ ಹಿನ್ನೆಲೆ ತಿಮ್ಮಪ್ಪಗೌಡ ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ 30 ನಿಮಿಷದೊಳಗೆ ಹೃದಯಾಘಾತವಾಗಿದೆ.
ಈ ಹೃದಯ ವಿದ್ರಾವಕ ಘಟನೆ ಕಂಡು ಗ್ರಾಮದ ಜನರು ಮರುಗಿದ್ದು, ತಿಮ್ಮಪ್ಪಗೌಡ ಕುಟುಂಬ ಆತಂಕದಲ್ಲಿದೆ. ಮೃತ ತಿಮ್ಮಪ್ಪ ಅವರಿಗೆ ಪತ್ನಿ, ಹಾಗೂ ಓರ್ವ ಪುತ್ರ ಇದ್ದಾರೆ.
BIGG NEWS: ಹಿಂದೂ ಪದ ಅಶ್ಲೀಲವಲ್ಲ, ಕಾಂಗ್ರೆಸ್ ಅಶ್ಲೀಲ ; ಸತೀಶ್ ಜಾರಕಿಹೊಳಿ ವಿರುದ್ಧ ಆರಗ ಜ್ಞಾನೇಂದ್ರ ಕಿಡಿ
BIGG NEWS : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ : ಹನಿ ನೀರಾವರಿಗಾಗಿ ಅರ್ಜಿ ಆಹ್ವಾನ