ಕೋಲಾರ : ಕೋಲಾರದಲ್ಲಿ ಆಟೋ ಚಾಲಕನನ್ನ ಭೀಕರವಾಗಿ ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ರಾಕ್ಷಸರು ಭೀಕರವಾಗಿ ಕೊಲೆ ಮಾಡಿದ್ದಾರೆ. ಬಂಗಾರಪೇಟೆಯ ಎಳೆಸಂದ್ರ ಗ್ರಾಮದ ಆಫ್ರಿದ್ ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿ 75 ರ ಕೆಂದಟ್ಟಿ ಬಳಿ ಈ ಒಂದು ಕೊಲೆ ನಡೆದಿದೆ. ರಸ್ತೆ ಬದಿ ನಿಂತಿರುವ ಆಟೋದಲ್ಲಿ ರಕ್ತ ಹರಿದಿದೆ.
ಮೃತ ಆಫೀದ್ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದ ಎಂದು ತಿಳಿದುಬಂದಿದೆ ಕಳೆದ ಎರಡು ದಿನಗಳ ಹಿಂದೆ ಆಫ್ರಿದ್ ಪತ್ನಿ ಜಗಳವಾಡಿ ಮನೆ ಸೇರಿದ್ದಾಳೆ. ಪತ್ನಿ ಗರ್ಭಿಣಿಯಾಗಿದ್ದು ಮೂರನೇ ಮಗುವಿನ ನಿರೀಕ್ಷೆಯಲ್ಲಿ ಆಫ್ರಿದ್ ಇದ್ದ. ಬೆಂಗಳೂರಿಗೆ ಹೊರಟಿದ್ದ ಬೆಳಿಗ್ಗೆ ರಸ್ತೆ ಬದಿ ಆಟೋದಲ್ಲಿ ಆಫ್ರಿದ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.