ತುಮಕೂರು : ತುಮಕೂರಲ್ಲಿ ಭೀಕರ ಅಪಘಾತ ಸಂಭ ವಿಸಿದ್ದು, ಟ್ಯೂಷನ್ಗೆ ತೆರಳುತ್ತಿದ್ದ ಬಾಲಕಿಯ ಮೇಲೆ ಈಚರ್ ವಾಹನ ಒಂದು ಹರಿದಿದೆ. ಘಟನೆಯಲ್ಲಿ ಪಿಯು ವಿದ್ಯಾರ್ಥಿನಿ ಪ್ರೀತಿ (16) ಎನ್ನುವ ಬಾಲಕಿ ಸಾವನ್ನಪ್ಪಿದ್ದಾಳೆ. ತುಮಕೂರು ಜಿಲ್ಲೆಯ ಪಾವಗಡದಲ್ಲಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ ಸ್ಕೂಟಿ ಮೇಲೆ ಸ್ನೇಹಿತೆಯರು ಟ್ಯೂಷನ್ಗೆ ತೆರಳುತ್ತಿದ್ದರು.
ಸ್ನೇಹಿತೆ ಪ್ರೇರಣಾ ಜೊತೆಗೆ ಪ್ರೀತಿ ಸಹ ತೆರಳುತ್ತಿದ್ದಳು. ಈ ವೇಳೆ ದ್ವಿಚಕ್ರ ವಾಹನಕ್ಕೆ ಈಚರ ವಾಹನ ಡಿಕ್ಕಿ ಹೊಡೆದ ಪರಿಣಾಮ ಈಚರ್ ವಾಹನ ಬಾಲಕಿಯ ಮೇಲೆ ಹರಿದು ಸ್ಥಳದಲ್ಲೇ ಪ್ರೀತಿ ಸಾವನಪ್ಪಿದ್ದಾಳೆ. ಅಪಘಾತದ ಬಳಿಕ ಈಚರ್ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಿನ್ನೆ ಸಂಜೆ 5:00ಗೆ ಈ ಒಂದು ಅಪಘಾತ ಸಂಭವಿಸಿದೆ. ಪಾವಗಡ ಟೌನ್ ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ.