ಮೈಸೂರು : ಮೈಸೂರಲ್ಲಿ ಅಪಘಾತ ಸಂಭವಿಸಿದ್ದು, ಬ್ರೇಕ್ ಫೇಲ್ ಆಗಿ ಕೆಎಸ್ಆರ್ಟಿಸಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ ನಂಜನಗೂಡು ತಾಲೂಕಿನ ಕಲ್ಮಹಳ್ಳಿ ಗೇಟ್ ಬಳಿ ಒಂದು ಅಪಘಾತ ಸಂಭವಿಸಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಲ್ಮಹಳ್ಳಿ ಎಂಬಲ್ಲಿ ನಂಜನಗೂಡು ಹಾಗು ಟಿ.ನರಸೀಪುರ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ ತೆರಳುತ್ತಿತ್ತು. ತಿರುವು ವೇಳೆ ಬ್ರೇಕ್ ಫೇಲ್ ಆಗಿ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆದಿದೆ.ತಕ್ಷಣ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಅಪಘಾತದ ಕುರಿತು ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.