ಬ್ರೆಜಿಲ್ : ರಸ್ತೆಯೊಂದರಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಏಳು ಮಂದಿ ಮಹಿಳೆಯರು ರಸ್ತೆಯಲ್ಲಿ ತೆರೆದ ಗುಂಡಿಗೆ ಬಿದ್ದ ಅಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈಶಾನ್ಯ ಬ್ರೆಜಿಲಿಯನ್ ನಗರದ ಅಲಗೋಯಿನ್ಹಾಸ್ನಲ್ಲಿ ಮನೆಯ ಹಿತ್ತಲಿನಲ್ಲಿ 7 ಹುಡುಗಿಯರು ಹುಟ್ಟುಹಬ್ಬದ ಪಾರ್ಟಿಮಾಡುತ್ತಾರೆ. ಈವೇಳೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಾಡೊಂದಕ್ಕೆ ನೃತ್ಯ ಮಾಡುವಾಗ ತಮ್ಮ ತೋಳುಗಳನ್ನು ಪರಸ್ಪರ ಸುತ್ತಿಕೊಂಡು ಒಂದು ಸಣ್ಣ ವೃತ್ತವನ್ನು ರಚಿಸುವುದನ್ನು ತೋರಿಸುತ್ತದೆ.
ಎಂಜಾಯ್ ಮಾಡುತ್ತಿದ್ದಂತೆ ರಸ್ತೆಯ ಕಾಂಕ್ರೀಟ್ ಫುಟ್ ಪಾತ್ ಇದ್ದಕ್ಕಿದ್ದಂತೆ ಬಿರುಕು ಬಿಟ್ಟಿತು. ಆ ಹೊಂಡಕ್ಕೆ ಬಿದ್ದು, ಸಣ್ಣಪುಟ್ಟ ಗಾಯಗೊಂಡಿದ್ದಾರೆ ಅದೃಷ್ಟವಷಾತ್, ಪ್ರಾಣಾಪಾಯದಿಂದ ಪಾರಾಗಿದ್ದಾರೆ.