ಬೆಂಗಳೂರು : ಬಿಜೆಪಿ ವಿರುದ್ಧ ಕಾಂಗ್ರೆಸ್ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯೊಂದನ್ನು ರದ್ದುಪಡಿಸಲು ಸ್ಪಷ್ಟವಾಗಿ ನಿರಾಕರಿಸಿರುವ ಹೈಕೋರ್ಟ್, ‘ವ್ಯಕ್ತಿಗೆ ಮಾನ ಎಷ್ಟು ಮುಖ್ಯವೋ ರಾಜಕೀಯ ಪಕ್ಷಗಳಿಗೂ ಅಷ್ಟೇ ಮುಖ್ಯ’ ಎಂಬ ಮಹತ್ವದ ತೀರ್ಪು ಪ್ರಕಟಿಸಿದೆ.
‘ನಿರುದ್ಯೋಗ’ ಭಾರತಕ್ಕೆ ಸಮಸ್ಯೆಯಲ್ಲ : ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ್ ಪನಗಾರಿಯಾ
ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು, ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ವಜಾಗೊಳಿಸಿದ್ದಾರೆ.
ಲೋಕಸಭಾ ಚುನಾವಣೆ 2024: ಬಿಜೆಪಿ-ಜೆಡಿಎಸ್ ಪಕ್ಷದ ಯಾರು ಬೇಕಾದರು ಕಾಂಗ್ರೆಸ್ಗೆ ಸೇರಿಕೊಳ್ಳಬಹುದು : ಡಿಸಿಎಂ ಡಿಕೆ
ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 499 ಮತ್ತು 500ರಲ್ಲಿ ‘ಯಾರೇ ಇರಲಿ’ ಎಂಬ ಪದವು ಸೂಚ್ಯವಾಗಿ ಸಂಘವನ್ನೂ ವ್ಯಕ್ತಿ ಎಂದೇ ವಿಶಾಲ ಅರ್ಥದಲ್ಲಿ ಒಳಗೆಳೆದುಕೊಂಡು ಗಮನಿಸುತ್ತದೆ. ಅಂತೆಯೇ, ಸಾಮಾನ್ಯ ವ್ಯಾಖ್ಯಾನ ಅಧಿನಿಯಮ–1897ರ ಅಡಿಯಲ್ಲೂ ರಾಜಕೀಯ ಪಕ್ಷಗಳನ್ನು ಕಾನೂನು ವ್ಯಕ್ತಿ ಎಂದೇ ಅರ್ಥೈಸಲಾಗುತ್ತದೆ. ಇಂತಹ ಕಾನೂನು ವ್ಯಕ್ತಿ ಎಂಬ ಪದದ ವ್ಯಾಪ್ತಿಗೆ ಸರ್ಕಾರಗಳು, ಕಂಪನಿಗಳು, ದೈವತಗಳು, ಕಾರ್ಮಿಕ ಸಂಘಗಳು ಸೇರ್ಪಡೆಯಾಗುತ್ತವೆ ಎಂದು ನ್ಯಾಯಪೀಠ ವಿವರಿಸಿದೆ.
‘ಎಪಿಎಂಸಿಗಳಲ್ಲಿ’ ಇಂದಿರಾ ಕ್ಯಾಂಟೀನ್ ಮಾದರಿಯ ಆಹಾರ: ಸಚಿವ ಶಿವಾನಂದ ಪಾಟೀಲ್
ರಾಜಕೀಯ ಪಕ್ಷವನ್ನು ಶಾಸನೀಯ ವ್ಯಕ್ತಿ ಎಂದು ಪರಿಗಣಿಸಲು ಆಗುವುದಿಲ್ಲ. ಯಾಕೆಂದರೆ, ಅದು ವ್ಯಕ್ತಿ ಅಲ್ಲ. ಹೀಗಾಗಿ, ರಾಜಕೀಯ ಪಕ್ಷದ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಲು ಬರುವುದಿಲ್ಲ. ಸ್ವಾಭಾವಿಕವಾದ ಜೀವಂತ ವ್ಯಕ್ತಿಗೆ (ರಕ್ತ, ಮಾಂಸ ತುಂಬಿಕೊಂಡ) ಉದ್ದೇಶ, ದುರುದ್ದೇಶದ ಭಾವನೆಗಳಿರುತ್ತವೆ. ಕೃತ್ರಿಮ ವ್ಯಕ್ತಿಗಳಿಗೆ ಅದು ಇರುವುದಿಲ್ಲ ಎಂಬ ಬಿಜೆಪಿಯ ವಾದವನ್ನು ನ್ಯಾಯಪೀಠ ಸಾರಾಸಗಟಾಗಿ ತಳ್ಳಿ ಹಾಕಿದೆ.