ದಾವಣಗೆರೆ: ಹೊನ್ನಾಳಿಯ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಇದೀಗ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ.
ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಸೋದರ ಪುತ್ರ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಚಂದ್ರಶೇಖರ್ ಕಾರು ತುಂಗಾ ಮುಖ್ಯ ಕಾಲುವೆಯಲ್ಲಿ ಬಿದ್ದಿದೆ. ಈ ಕಾರನ್ನು ಅಗ್ನಿಶಾಮಕ ಸಿಬ್ಬಂದಿಗಳು ಮೇಲಿತ್ತಿದಾಗ ಅದರಲ್ಲಿ ಶಾಸಕರ ಸಹೋದರನ ಪುತ್ರ ಚಂದ್ರಶೇಖರ್ ಮೃತದೇಹ ಪತ್ತೆಯಾಗಿರೋದಾಗಿ ತಿಳಿದು ತಿಳಿದು ಬಂದಿದೆ.
ಚಂದ್ರಶೇಖರ್ ಸಾವಿನ ಸುತ್ತ ಅನುಮಾನದ ಹುತ್ತ
1) ಡ್ರೈವರ್ ಸೀಟ್ ಬೆಲ್ಟ್ ಲಾಕ್ ಆಗಿದ್ದರೂ ಹಿಂಬದಿ ಸೀಟ್ ನಲ್ಲಿ ಮೃತದೇಹ ಸಿಕ್ಕಿದೆ.
2) ಕ್ರೇಟಾ ಕಾರಿನ ಮುಂಭಾಗದ ಗಾಜು ಒಡೆದಿದ್ದು, ಕಲ್ಲು ಎತ್ತಿ ಹಾಕಿ ಒಡೆದಂತೆ ಕಾಣುತ್ತಿದೆ
3) ನಾಲೆಯ ತಡೆಗೋಡೆಗೆ ಹೆಚ್ಚು ಹಾನಿ ಆಗದಿರುವುದು
4) ಕಾರು ಹಿಂಬದಿ ನಜ್ಜು ಗುಜ್ಜಾಗಿರುವುದು
5) ಮೃತ ಚಂದ್ರು ಮೊಬೈಲ್ ಟವರ್ ಲೊಕೇಶನ್ ಬೇರೆ ಕಡೆ ಕೊನೆಯಾಗಿದೆ.
ಚಂದ್ರಶೇಖರ್ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಕಾರಿನ ಹಿಂಬದಿ ಸೀಟ್ ನಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಕಾರಿನ ಹಿಂಬದಿ ಸೀಟಿಗೆ ಚಂದ್ರಶೇಖರ್ ಶವ ಹೇಗೆ ಬಂತು..ಇದು ಆತ್ಮಹತ್ಯೆಯೋ..ಕೊಲೆಯೋ ಎಂಬುದು ಗೊತ್ತಾಗಿಲ್ಲ. ಕಳೆದ ಐದು ದಿನಗಳಿಂದ ನಾಪತ್ತೆಯಾದ ಚಂದ್ರಶೇಖರ್ ಸಾವಿಗೆ ಕಾರಣವೇನು..? ಅವರಾಗಿಯೇ ಆತ್ಮಹತ್ಯೆ ಮಾಡಿಕೊಂಡರಾ..ಅಥವಾ ಯಾವುದಾದರೂ ವೈಷ,ಮ್ಯದ ಹಿನ್ನೆಲೆ ಚಂದ್ರಶೇಖರ್ ರನ್ನು ಕೊಲೆ ಮಾಡಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ. ಅದೇನೆ ಇರಲಿ ಪೊಲೀಸ್ ತನಿಖೆಯಿಂದಲೇ ಚಂದ್ರಶೇಖರ್ ಸಾವಿನ ರಹಸ್ಯ ಗೊತ್ತಾಗಬೇಕಿದೆ.
ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ ಪ್ರಕರಣ ಸಂಬಂಧ ಪೊಲಿಸರು ಪರಿಶೀಲನೆ ನಡೆಸಿದಾಗ ತುಂಗಾ ಮುಖ್ಯ ಕಾಲುವೆಯಲ್ಲಿ ಚಂದ್ರಶೇಖರ್ ಬಿಳಿ ಬಣ್ಣದ ಕಾರು ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ತುಂಗಾ ಕಾಲುವೆಗೆ ಚಂದ್ರಶೇಖರ್ ಕಾರು ಬಿದ್ದಿರುವುದು ಖಾತ್ರಿಯಾಗಿದೆ. ಈ ಹಿನ್ನೆಲೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದು, ಕ್ರೇನ್ ಮೂಲಕ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಈ ಕಾರಿನಲ್ಲಿ ಚಂದ್ರಶೇಖರ್ ಮೃತದೇಹ ಇರುವುದು ಪತ್ತೆಯಾಗಿದೆ.
ಅಂದಹಾಗೇ ಕಳೆದ ಐದು ದಿನಗಳಿಂದ ನಾಪತ್ತೆಯಾಗಿರುವ ಚಂದ್ರಶೇಖತ್ ಪತ್ತೆಗೆ ಪೊಲಿಸರು ತೀವ್ರ ಹುಡುಕಾಟ ನಡೆಸಿದ್ದು, ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ತುಂಗಾ ಕಾಲುವೆ ಬಳಿ ಚಂದ್ರಶೇಖರ್ ಕಾರು ಸಂಚರಿಸಿದೆ ಎಂಬ ಕುರುಹು ಪತ್ತೆಯಾಗಿತ್ತು, ಈ ಹಿನ್ನೆಲೆ ತುಂಗಾ ಕಾಲುವೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
BIGG NEWS ; ‘ಭಾರತೀಯ ರೈಲ್ವೆ’ ಮಹತ್ವದ ನಿರ್ಧಾರ ; ನೆರೆ ದೇಶದಲ್ಲಿ ‘ಸರಕು ಸಾಗಣೆ’ಯತ್ತಾ ಹೆಜ್ಜೆ
ಧ್ಯಾನವನ್ನು “ರಾಜಕೀಯ ಗಿಮಿಕ್” ಎನ್ನಲು ಟಿಪ್ಪು ಆರಾಧಕರಿಂದ ಮಾತ್ರ ಸಾಧ್ಯ : ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು