ಬೆಂಗಳೂರು : ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ಬ್ಯಾನರ್ ಹಾಕಿದರೆ ಭಾರಿ ದಂಡ ವಿಧಿಸಲಾಗುತ್ತದೆ ಎಂದು ಇತ್ತೀಚಿಗೆ ಬಿಬಿಎಂಪಿ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಇದರ ಬೆನ್ನೆಲ್ಲೆ ಎಂದು ಗ್ರಹ ಸಚಿವ ಜಿ ಪರಮೇಶ್ವರ್ ಅವರ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ಸದಾಶಿವ ನಗರದ ಅವರ ಮನೆಯ ಮುಂದೆನೆ ಅವರ ಅಭಿಮಾನಿಗಳು ಬ್ಯಾನರ್ ಫ್ಲೆಕ್ಸ್ ಅಳವಡಿಸಿದ್ದಾರೆ.
ಹೌದು ಬೆಂಗಳೂರಿನಲ್ಲಿ ಫ್ಲೆಕ್ಸ್ ಬ್ಯಾನರ್ ಹಾವಳಿ ಮುಂದುವರೆದಿದ್ದು, ಕಾನೂನು ಮಾಡೋರಿಂದಲೇ ಇದೀಗ ರೂಲ್ಸ್ ಬ್ರೇಕ್ ಹಾಕಲಾಗಿದೆ. ಗೃಹ ಸಚಿವರ ಮನೆ ಮುಂದೆನೆ ಫ್ಲೇಕ್ಸ್, ಬ್ಯಾನರ್ ಹಾಕಲಾಗಿದೆ. ಬೆಂಗಳೂರಿನ ಸದಾಶಿವನಗರದ ಗೃಹ ಸಚಿವ ಡಾ. ಜಿ ಪರಮೇಶ್ವರ್ ನಿವಾಸದಲ್ಲಿ ಬ್ಯಾನರ್ ಹಾವಳಿ ಕಂಡುಬಂದಿದೆ.
ಗೃಹ ಸಚಿವ ಪರಮೇಶ್ವರ್ ಅವರ ಬರ್ತ್ ಡೇ ಹಿನ್ನೆಲೆ ಸದಾಶಿವನಗರದ ನಿವಾಸದ ಸುತ್ತಮುತ್ತ ಫ್ಲೆಕ್ಸ, ಬ್ಯಾನರ್ ಹಾಕಲಾಗಿದೆ. ಅತ್ತ ಫ್ಲೆಕ್ಸ್ ಕಂಟ್ರೋಲ್ ಗೆ ರಾತ್ರಿ ವೇಳೆ ಗಸ್ತು ತಿರುಗಲು ಪಾಲಿಕೆ ಜೊತೆ ಖಾಕಿ ಪಡೆ ಕೈ ಜೋಡಿಸಿತ್ತು. ಆದರೆ ಇದೀಗ ಅದೇ ಪೊಲೀಸ್ ಇಲಾಖೆ ನಿರ್ವಹಿಸುವ ಗೃಹ ಸಚಿವರಿಂದಲೇ ರೂಲ್ಸ್ ಬ್ರೇಕ್ ಆಗಿದೆ. ರಾಜಕಾರಣಿಗಳಿಗೆ ಒಂದು ನ್ಯಾಯ, ಜನರಿಗೆ ಮತ್ತೊಂದು ನ್ಯಾಯನಾ? ಎಂದು ಜನಪ್ರತಿನಿಧಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.