ಬೆಂಗಳೂರು : ರಾಜ್ಯದಲ್ಲಿ ಮತ್ತೆ ಮೂವರು ಡಿಸಿಎಂ ಹುದ್ದೆ ನೇಮಕ ವಿಚಾರ ಮುನ್ನಡೆಗೆ ಬಂದಿದ್ದು, ಸಹಕಾರ ಸಚಿವ ಕೆ ಎನ್ ರಾಜಣ್ಣ ಮೂರು ಡಿಸಿಎಂಗಳನ್ನು ನೇಮಕ ಮಾಡಿ ಎಂದು ಹೇಳಿಕೆಗೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರ ಹೈಕಮಾಂಡ್ ನಲ್ಲಿದ್ದರೆ ಖಂಡಿತವಾಗಿ ಮಾಡೇ ಮಾಡುತ್ತಾರೆ ನನ್ನ ಅಭಿಪ್ರಾಯ ಹೈಕಮಾಂಡ್ ಅಭಿಪ್ರಾಯ ಎರಡು ಒಂದೇ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಡಿಸಿಎಂ ಹುದ್ದೆ ಬಗ್ಗೆ ಯಾರು ಎಲ್ಲಿ ಚರ್ಚೆ ಮಾಡಿದ್ದಾರೆ? ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.ಸಚಿವ ಕೆಎನ್ ರಾಜಣ್ಣ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಎಂಪಿ ಚುನಾವಣೆಗೂ ಮುನ್ನ ಡಿಸಿಎಂ ಮಾಡಲಿ ಅನ್ನೋ ಸಲಹೆಯನ್ನು ನೀಡಿದ್ದಾರೆ. ಆದರೆ ಹೈಕಮಾಂಡ್ ದೃಷ್ಟಿಕೋನ ಏನು ಅನ್ನೋದು ಗೊತ್ತಿಲ್ಲ.ಮೂವರನ್ನು ಡಿಸಿಎಂ ಮಾಡಿದರೆ ಲೋಕಸಭೆ ಚುನಾವಣೆಯನ್ನು ಗೆಲ್ಲಬಹುದು ಇದು ಹೈಕಮಾಂಡ್ ಗಮನದಲ್ಲಿದ್ದರೆ ಅವರು ಮಾಡೇ ಮಾಡುತ್ತಾರೆ.ನನ್ನ ಅಭಿಪ್ರಾಯ ಹೈಕಮಾಂಡ್ ಅಭಿಪ್ರಾಯ ಒಂದೇ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ರಾಜ್ಯದಲ್ಲಿ ಹೆಚ್ಚುವರಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿಕೆ ನೀಡಿದ್ದಾರೆ. ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ್ರೆ ಲೋಕಸಭೆ ಚುನಾವಣೆಗೆ ಅನುಕೂಲವಾಗಲಿದೆ.ಲೋಕಸಭೆ ಚುನಾವಣೆ ದೃಷ್ಟಿಯಿಂದ ನಾನು ಹೇಳಿದ್ದೇನೆ ಎಂದು ಮತ್ತಾವರ ಗ್ರಾಮದಲ್ಲಿ ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
ಡಿಸಿಎಂ ಮಾಡೋದು ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರವಾಗಿದೆ ನಾನು ಹೇಳಿದ ತಕ್ಷಣ ಡಿಸಿಎಂ ಮಾಡೇ ಬಿಡುತ್ತಾರೆ ಅಂತ ಅಲ್ಲ ಬಿಜೆಪಿ ಸಹ ಮೂರು ರಾಜ್ಯಗಳಲ್ಲಿ ಮೂರು ಡಿಸಿಎಂ ಮಾಡಿದ್ದಾರೆ ನಮ್ಮಲ್ಲೂ ಸಹ ಮೂವರನ್ನು ಡಿಸಿಎಂ ಮಾಡಿ ಅಂತ ಸಲಹೆ ಅಷ್ಟೇ ಎಂದು
ತಿಳಿಸಿದರು.