ಬೆಂಗಳೂರು : ವಕ್ಫ್ ನೋಟಿಸ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ನಡುವೆ ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದ್ದ ‘ವಕ್ಫ್ ಹಠಾವೋ, ದೇಶ ಬಚಾವೋ’ ಪ್ರತಿಭಟನೆಯ ವೇಳೆ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಮಕ್ಕಳ ಕೈಗೆ ಪೆನ್ನು ಬದಲಾಗಿ ತಲ್ವಾರ್ ಕೊಡಿ’ ಎಂದು ಹೇಳಿಕೆ ನೀಡಿದ್ದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮರುಳಾರಾಧ್ಯ ಶ್ರೀಗಳು ಮಕ್ಕಳ ಕೈಗೆ ಪೆನ್ ಬದಲು ತಲ್ವಾರ್ ಕೊಡಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಮರುಳಾರಾಧ್ಯ ಶಿವಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಕೈಯಲ್ಲಿ ಪೆನ್ ಬದಲು ತಲ್ವಾರ್ ಕೊಡಿ ಅಂತಾರೆ. ಯಾವ ಸೆಕ್ಷನ್‌ನಡಿ ಕ್ರಮ ತೆಗೆದುಕೊಳ್ಳಬೇಕೆಂದು ನೋಡೋಣ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ತಾರೆ ಎಂದರು.
‘FIR’ ದಾಖಲು
ವಕ್ಫ್ ತೆಗೆಯದಿದ್ದರೆ ಜೀವ ತೆಗೆಯೋಕೆ ನಾವು ರೆಡಿ. ಜೀವ ಕೊಡುವುದಕ್ಕೂ, ಜೀವ ತೆಗೆಯುವುದಕ್ಕೂ ಸಿದ್ಧರಿದ್ದೀವಿ ಹುಷಾರ್, ಯುವಕರ ಮನೆಯಲ್ಲಿ ತಲ್ವಾರ್ ಇವೆ. ಎಲ್ಲರ ಮನೆಯಲ್ಲಿ ಎಲ್ಲ ಇದೆ. ಯಾರ್ ಬರುತ್ತಾರೆ ಅವರನ್ನು ತಲ್ವಾರ್‌ನಿಂದ ಕಡಿಯುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಪ್ರತಿಭಟನಾ ಧರಣಿಯಲ್ಲಿ ಸ್ವಾಮೀಜಿ ನೀಡಿರುವ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರಚೋದನಾಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಇದೀಗ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯಿದೆ 299, 353/2 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.