ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ದೂರು ನೀಡಿದಂತ ಮಹಿಳೆ ಮಾನಸಿಕ ಅಸ್ವಸ್ಥೆ. ಆ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳೋದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪೋಕ್ಸೋ ಕೇಸ್ ಬಹಳ ಸೂಕ್ಷ್ಮವಾದಂತ ವಿಚಾರವಾಗಿದೆ. ನಾವು ರಾಜಕೀಯ ಇದರಲ್ಲಿ ಮಾಡೋದಿಲ್ಲ. ಯಾವುದೇ ವಿಷಯ ತಿಳಿಸೋದಕ್ಕೂ ಆಗಲ್ಲ. ಮಹಿಳೆಯ ದೂರು ಆಧರಿಸಿ, ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ದೂರು ನೀಡಿದಂತ ಮಹಿಳೆ ಮಾನಸಿಕವಾಗಿ ಅಸ್ವಸ್ಥೆ ಎಂಬುದಾಗಿ ಹೇಳಲಾಗುತ್ತಿದೆ. ಜೊತೆಗೆ ಆಕೆ ಕೈ ಬರಹದಿಂದ ದೂರು ನೀಡಿಲ್ಲ. ಬದಲಾಗಿ ಟೈಪ್ ಮಾಡಿಸಿದಂತ ದೂರನ್ನು ಪೊಲೀಸರಿಗೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯ ನಂತ್ರ ಇನ್ನಷ್ಟು ಮಾಹಿತಿ ತಿಳಿಸುತ್ತೇನೆ. ಅಲ್ಲಿಯವರೆಗೆ ನಾನು ಈ ಪ್ರಕರಣ ಕುರಿತಂತೆ ಏನೂ ಮಾತನಾಡುವುದಿಲ್ಲ ಎಂಬುದಾಗಿ ಹೇಳಿದರು.
‘ನಮ್ಮ ಮೆಟ್ರೋ’ 3ನೇ ಹಂತದ ವಿಸ್ತರಣೆಗೆ ಡಬಲ್ ಡೆಕ್ಕರ್ ಮಾದರಿ ನಿರ್ಮಿಸಲು BMRCL ಚಿಂತನೆ
BREAKING : ಭೂಪಾಲ್ ನ ‘ಟೆಂಟ್ ಹೌಸ್’ ಗೋದಾಮಿನಲ್ಲಿ ‘ಸಿಲಿಂಡರ್’ ಸ್ಫೋಟದಿಂದ ಭಾರಿ ಅಗ್ನಿ ಅವಘಡ