ಬೆಂಗಳೂರು : ಈಗಾಗಲೇ ಧರ್ಮಸ್ಥಳದಲ್ಲಿ ಶವ ಹೂತು ಹಾಕಿರುವ ಕುರಿತು SIT ಅಧಿಕಾರಿಗಳು ಚಿನ್ನಯನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ ಇದರ ಮಧ್ಯ ಸೌಜನ್ಯ ಪ್ರಕರಣದ ಕುರಿತು ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪ್ರಕರಣದ ತನಿಖೆ ನಡೆಸುತ್ತಿದ್ದು, ಸೌಜನ್ಯ ಪ್ರಕರಣದ ಮರು ತನಿಖೆ ಎನ್ನಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ಸೌಜನ್ಯ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಉದಯ ಕುಮಾರ್ ಜೈನ್ ಅವರನ್ನು ಎಸ್‌ಐಟಿ ಅಧಿ ಕಾರಿಗಳು ವಿಚಾರಣೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಿಗಳು ಯಾವ ಆಧಾರದಲ್ಲಿ ವಿಚಾರಣೆ ನಡೆಸಿ ದ್ದಾರೋ ಗೊತ್ತಿಲ್ಲ. ಅವರಿಗೆ ಸಿಕ್ಕಿರುವ ಮಾಹಿತಿ ಏನು? ಏನಾದರೂ ಮಾಹಿತಿ ಸಿಕ್ಕಿದೆಯೇ ಎಂಬ ಮಾಹಿತಿ ಇಲ್ಲ. ತನಿಖೆ ಸಂದರ್ಭದಲ್ಲಿ ಬೇಕಾದಷ್ಟು ವಿಚಾರ ಕಲೆ ಹಾಕಿರುತ್ತಾರೆ. ಎಸ್‌ಐಟಿಗೆ ಮಾಹಿತಿ ಕೊಡುವವರು ಏನೋ ಮಾಹಿತಿ ನೀಡಿರಬಹುದು. ಅದಕ್ಕಾಗಿ ಉದಯ್ ಜೈನ್‌ರನ್ನು ಕರೆಸಿರಬಹುದು ಎಂದರು.
ಟಮನ್‌ಸ್ ಆಫ್ ರೆಫರೆನ್ಸ್ ನಲ್ಲಿ ಇಲ್ಲದಿದ್ದರೂ ಲಿಂಕ್ ಇರು ತ್ತಲ್ವ? ಲಿಂಕ್‌ಗಳ ಪರಿಶೀಲನೆ ಮಾಡಬೇಕಾ ಗುತ್ತದೆ. ಇಲ್ಲದಿದ್ರೆ ತನಿಖೆ ಪೂರ್ಣ ಆಗುವುದಿಲ್ಲ. ಕ್ರಾಸ್ ರೆಫರೆನ್ಸ್‌ನಲ್ಲಿ ಯಾರು ಏನು ಮಾಹಿತಿ ಕೊಟ್ಟಿದ್ದಾರೋ ಗೊತ್ತಿಲ್ಲ. ಧರ್ಮಸ್ಥಳ ಪ್ರಕರಣಗಳ ಸಂಬಂಧ ಯಾವುದೋ ಲಿಂಕ್ ಸಿಕ್ಕಿರಬೇಕು. ಇದು ಸೌಜನ್ಯ ಪ್ರಕರಣದ ಮರು ತನಿಖೆ ಅಂತ ನಾನು ಹೇಳುವುದಿಲ್ಲ. ಯಾವ ಲಿಂಕ್, ಯಾವಉದ್ದೇಶದಿಂದತನಿಖೆಮಾಡುತ್ತಿದ್ದಾರೆ ಎಂದು ಆ ನಂತರ ಗೊತ್ತಾಗಲಿದೆ ಎಂದರು.