ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು 32 ಅಡಿ ಎತ್ತರದ ಹನುಮ ಮೂರ್ತಿ ಹಾಗೂ ಸೀತಾರಾಮ ಲಕ್ಷ್ಮಣರ ದೇವಸ್ಥಾನವನ್ನು ಉದ್ಘಾಟಿಸಿ ಶ್ರೀರಾಮ ಯಾರ ಸ್ವತ್ತು ಅಲ್ಲ ನಾನು ಕೂಡ ಜೈ ಶ್ರೀ ರಾಮ ಎಂದು ಘೋಷಣೆ ಹೇಳುತ್ತೇನೆ ಎಂದು ಘೋಷಣೆ ಕೂಗಿದರು. ಇದಕ್ಕೆ ಬಿಜೆಪಿ ನಾಯಕರು ಹಲವು ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದರು.
ಬಿಜೆಪಿಯವರ ಹೇಳಿಕೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಜೈ ಶ್ರೀ ರಾಮ್ ಅಂದರೆ ತಪ್ಪೇನಿದೆ? ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ ತಿಳಿಸಿದರು.ನಾವು ಕೂಡ ಜೈ ಶ್ರೀ ರಾಮ್ ಎಂದು ಹೇಳಿದ್ದೇವೆ.ಹೇಳದೆ ಇದ್ದರೆ ಶ್ರೀರಾಮ ವಿರೋಧಿ ಅಂತೀರಾ ನಾವೆಲ್ಲ ರಾಮನ ಭಕ್ತರೇ. ನಮಗೆ ದಶರಥ ರಾಮ ಬೇಕು, ಮೋದಿ ರಾಮ ಅಲ್ಲ.ರಾಮನ ಹೆಸರಲ್ಲಿ ಒಡೆದಾಳುವವರು ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಸೇರಿದ ಪಿಎಸ್ಐ ಅಕ್ರಮದ ತನಿಖ ವರದಿ ಕುರಿತು ಮಾತನಾಡಿ, ಕಳೆದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಡೆದಿದೆ ಎನ್ನಲಾದ 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತಿ ಒಂದನ್ನು ರಚಿಸಿತ್ತು.
ಹೈಕೋರ್ಟ್ ನ ನಿವೃತ್ತ ನ್ಯಾಯ ಬಿ ವೀರಪ್ಪ ನೇತೃತ್ವದ ಸಮಿತಿಯು ಸುಮಾರು 470ಕ್ಕೂ ಹೆಚ್ಚು ಪುಟಗಳಷ್ಟು ಅಕ್ರಮದ ತನಿಖಾ ವರದಿಯನ್ನು ತಯಾರಿಸಿ ನಿನ್ನೆ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. ಈ ಒಂದು ಪ್ರಕರಣದಲ್ಲಿ ರಾಜಕಾರಣಿಗಳು ಸೇರಿದಂತೆ ಪ್ರಭಾವ ವ್ಯಕ್ತಿಗಳು ಕೂಡ ಶಾಮಿಲ್ ಆಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿ, ರಾಜ್ಯ ಸರ್ಕಾರ ಪಿ ಎಸ್ ಐ ಅಕ್ರಮದ ವರದಿಯನ್ನು ಪರಿಶೀಲನೆ ಮಾಡುತ್ತದೆ. ವರದಿಯಲ್ಲಿ ಯಾರ ಹೆಸರಿದೆ ಎಂದು ನೋಡಿಲ್ಲ. ನಾವೆಲ್ಲ ಕುಳಿತು ವರದಿಯನ್ನು ವಿಶ್ಲೇಷಣೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ ತಿಳಿಸಿದರು.