ತುಮಕೂರು: ಸಚಿವ ಉಮೇಶ್ ಕತ್ತಿ ನಿಧನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದಾರೆ. ಕತ್ತಿ ಅವರು ಇದ್ದದ್ದು ಇದ್ದ ಹಾಗೆ ಹೇಳುವ ಅಭ್ಯಾಸ ಅವರಲ್ಲಿ ಇತ್ತು. ಉಮೇಶ್ ಕತ್ತಿ ನಿಧನ ಅತ್ಯಂತ ದುಖವಾಗಿದೆ. ನನ್ನ ಆತ್ಮೀಯರಲ್ಲಿ ಒಬ್ಬರಾಗಿದ್ದರು. ಅನಾರೋಗ್ಯದ ಕಾರಣ ಕಳೆದ ಕ್ಯಾಬಿನೆಟ್ ಗೆ ಅವರು ಹಾಜರಾಗಿರಲಿಲ್ಲ ಎಂದರು.
BIGG NEWS: ಬೆಂಗಳೂರಿನಲ್ಲಿ ಪ್ರವಾಹದ ನಡುವೆಯೂ ಟೆಂಪ್ಟ್ ಆಗಿ ದೋಸೆ ತಿನ್ನಲು ಹೋದ ಸಂಸದ ತೇಜಸ್ವಿ ಸೂರ್ಯಗೆ ತರಾಟೆ
ಅತ್ಯಂತ ಒಳ್ಳೆಯವರು ಮತ್ತು ಹಾಸ್ಯ ಪ್ರಜ್ಞೆ ಉಳ್ಳವರಾಗಿದ್ದರು. ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದವರಾಗಿದ್ದರು. ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ಕೊಡಲಿ. ಅವರ ನಿಧನದಿಂದ ನನ್ನ ಎಲ್ಲಾ ಕೆಲಸ ಕಾರ್ಯ ರದ್ದು ಮಾಡಿದ್ದೇನೆ. ಜನೋತ್ಸವದ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ಹಿರಿಯರು ನಿರ್ಧರಿಸುತ್ತಾರೆ ಎಂದು ಆರಗ ತಿಳಿಸಿದರು.
BIGG NEWS: ಬೆಂಗಳೂರಿನಲ್ಲಿ ಪ್ರವಾಹದ ನಡುವೆಯೂ ಟೆಂಪ್ಟ್ ಆಗಿ ದೋಸೆ ತಿನ್ನಲು ಹೋದ ಸಂಸದ ತೇಜಸ್ವಿ ಸೂರ್ಯಗೆ ತರಾಟೆ
ಈಗ ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಶೇ. 300-400 ಪ್ರಮಾಣಕ್ಕಿಂತ ಹೆಚ್ಚಾಗಿದೆ. 3 ಸಾವಿರ ಎಕರೆಯಷ್ಟು ಬೆಳೆಹಾನಿಯಾಗಿದೆ. ಇಲ್ಲಿಯವರೆಗೆ ಸುಮಾರು 10 ಜನ ಸಾವನಪ್ಪಿದ್ದಾರೆ ಎಂದು ಅವರು ಹೇಳಿದರು.