ಬೆಂಗಳೂರು: ಮಂಗಳೂರು ನಗರದಲ್ಲಿ ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ನನ್ನು ಉಗ್ರ ಎಂದು ಯಾವ ತನಿಖೆಯನ್ನೂ ನಡೆಸದೇ ಹೇಗೆ ಘೋಷಣೆ ಮಾಡಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಡಿಕೆಶಿ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಜವಾಬ್ದಾರಿ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ನೀಡಬಾರದು, ಡಿಕೆಶಿ ಮಂತ್ರಿಯಾದವರು , ಈ ವಿಚಾರ ಕೇಳಿ ಬಹಳ ನೋವಾಯಿತು ಎಂದು ಹೇಳಿದ್ದಾರೆ. ದೇಶದ ಆಂತರಿಕ ಭದ್ರತೆ ವಿಚಾರ, ಡಿಕೆಶಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ, ಜವಾಬ್ದಾರಿ ಸ್ಥಾನದಲ್ಲಿರುವ ಡಿಕೆ ಶಿವಕುಮಾರ್ ಇಂತಹ ಹೇಳಿಕೆ ನೀಡಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಮಂಗಳೂರು ನಗರದಲ್ಲಿ ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ನನ್ನು ಉಗ್ರ ಎಂದು ಯಾವ ತನಿಖೆಯನ್ನೂ ನಡೆಸದೇ ಹೇಗೆ ಘೋಷಣೆ ಮಾಡಿದ್ದೀರಿ ಮಂಗಳೂರಿನಲ್ಲಿ ನಡೆದ ಸ್ಫೋಟ ಮುಂಬೈ ಆಟ್ಯಾಕ್ ಅಥವಾ ಪುಲ್ವಾಮಾ, ಕಾಶ್ಮೀರದಲ್ಲಿ ಆದಂತೆ ಆಗಲಿಲ್ಲ. ಅದೇನೋ ಕುಕ್ಕರ್ ಟೆರರಿಸ್ಟ್ ಎಂದುಕೊಂಡು ವೋಟರ್ ಐಡಿ ಹಗರಣವನ್ನು ಮುಚ್ಚಿ ಹಾಕಿದರು. ತನಿಖೆ ನಡೆಸದೇ ಇದು ಉಗ್ರ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಷ್ಟು ಸ್ಪೀಡ್ ಆಗಿ ಹೇಗೆ ಟ್ವೀಟ್ ಮಾಡಿದ್ರು ಎಂದು ಡಿಕೆಶಿ ಪ್ರಶ್ನಿಸಿದ್ದರು.