ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊಳೆನರಸೀಪುರ ಉಪ ನೋಂದಣಾಧಿಕಾರಿ ಭಾಸ್ಕರ್ ಚೌರ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಭಾಸ್ಕರ್ ಚೌರ, ಹಿಂದಿನ ಉಪ ನೋಂದಣಾಧಿಕಾರಿ, ಜಾಲ ಹಾಲಿ ಉಪನೋಂದಣಾಧಿಕಾರಿ, ಉಪ ನೋಂದಣಿ ಕಚೇರಿ, ಹೊಳೆನರಸೀಪುರ ಇವರು ಈ ಹಿಂದೆ ಜಾಲ ಉಪ ನೋಂದಣಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಇವರ ಮೇಲೆ ಹಿಂದಿನ ಭ್ರಷ್ಟಾಚಾರ ನಿಗ್ರಹದಳ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಅಂದಹಾಗೇ ಹೊಳೆನರಸೀಪುರ ಉಪ ನೋಂದಣಾಧಿಕಾರಿ ಭಾಸ್ಕರ್ ಚೌರ ಅವರು, ಜಾಲ ಉಪ ನೋಂದಣಾಧಿಕಾರಿಯಾಗಿದ್ದಂತ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಂದ ದಾಸ್ತಾವೇಜಿನ ನೋಂದಣಿಗಾಗಿ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿಗೆ ಅಂದು ದೂರು ನೀಡಿದ್ದರು. 25000 ಲಂಚದ ಹಣದಲ್ಲಿ 15000 ನೀಡುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದರು. ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಈ ಕಾರಣಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಬಳಿಕ ತನಿಖಾ ವರದಿಯನ್ನು ಆಧರಿಸಿ, ಭಾಸ್ಕರ್ ಚೌರ ಅವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 8(viii) ರನ್ವಯ ಸರ್ಕಾರಿ ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ.
ಮಂಡ್ಯ: ಕ್ರೀಡಾಕೂಟದಿಂದ ‘ಶಿಕ್ಷಕ’ರಿಗೆ ಚೈತನ್ಯ- ಬಿಇಓ ಸಿ.ಎಚ್ ಕಾಳೀರಯ್ಯ
ಮಂಡ್ಯ: ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ ಶ್ರೀರಂಗಪಟ್ಟಣ ದಸರಾ- DC ಡಾ.ಕುಮಾರ