Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಜಾಗತಿಕ ಹವಾಮಾನ ಏರುಪೇರು: ಈ ವರ್ಷ ‘ಸೂಪರ್ ಎಲ್ ನಿನೋ’ ಭೀತಿ; ಮಾನ್ಸೂನ್ ಮಳೆ ವಿನ್ಯಾಸ ಸಂಪೂರ್ಣ ಏರುಪೇರು ಸಾಧ್ಯತೆ: ವಿಜ್ಞಾನಿಗಳ ಎಚ್ಚರಿಕೆ!

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

BREAKING : ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ : ಗೂಡ್ಸ್ ಆಟೋ-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸಾವು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯ: ಕ್ರೀಡಾಕೂಟದಿಂದ ‘ಶಿಕ್ಷಕ’ರಿಗೆ ಚೈತನ್ಯ- ಬಿಇಓ ಸಿ.ಎಚ್‌ ಕಾಳೀರಯ್ಯ
KARNATAKA

ಮಂಡ್ಯ: ಕ್ರೀಡಾಕೂಟದಿಂದ ‘ಶಿಕ್ಷಕ’ರಿಗೆ ಚೈತನ್ಯ- ಬಿಇಓ ಸಿ.ಎಚ್‌ ಕಾಳೀರಯ್ಯ

By ವಸಂತ ಬಿ ಈಶ್ವರಗೆರೆ

ಮಂಡ್ಯ : ಸದಾ ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಯೋಚಿಸುವ ಶಿಕ್ಷಕರಿಗೆ ಶಿಕ್ಷಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಿನ ಚೈತನ್ಯ ನೀಡುತ್ತದೆ ಎಂದು ಮದ್ದೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ಹೇಳಿದರು.

ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸೋಮವಾರ ಶಿಕ್ಷಣ ಇಲಾಖೆಯ ವಿವಿಧ ಸಂಘಗಳಿಂದ ಆಯೋಜಿಸಿದ್ದ ಶಾಲಾ ಶಿಕ್ಷಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಶಾಲೆಯಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದಲ್ಲಿ ಹೆಚ್ಚಿನ ಗಮನವಿರಿಸುವುದರಿಂದ ಬಹುತೇಕ ಸಂದರ್ಭಗಳಲ್ಲಿ ತಮ್ಮ ಆಸಕ್ತಿಯ ಕ್ರೀಡೆ, ಹವ್ಯಾಸಗಳನ್ನು ಮರೆತು ಬಿಟ್ಟಿರುತ್ತಾರೆ. ಹೀಗಾಗಿ ಇಂತಹ ಕ್ರೀಡಾಕೂಟಗಳು ವೃತ್ತಿ ಜೀವನದಲ್ಲಿ ಚಿರಸ್ಮರಣಿಯವಾಗಿ ಉಳಿಯುತ್ತವೆ. ಹೀಗಾಗಿ ಕ್ರೀಡಾಕೂಟದಲ್ಲಿ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕ್ರೀಡೆ ಪರಸ್ಪರರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುವುದಲ್ಲದೆ, ಒತ್ತಡ ನಿಯಂತ್ರಣಕ್ಕೆ ಅವಕಾಶ ಮಾಡಿಕೊಡುತ್ತದೆ. ಇಂದು ಶಿಕ್ಷಕರು ಮಾಡದ ಕೆಲಸವಿಲ್ಲ. ಜನಗಣತಿ, ಚುನಾವಣೆ ಸೇರಿದಂತೆ 42ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಶಿಕ್ಷಕರು ನಿರ್ವಹಿಸಬೇಕಾಗಿದ್ದು, ಒತ್ತಡ ಹೆಚ್ಚಿರುತ್ತದೆ. ವರ್ಷದಲ್ಲಿ ಕನಿಷ್ಠ ಎರಡು ದಿನಗಳಾದರೂ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿದಲ್ಲಿ ಮನಸ್ಸಿನ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಇದೇ ವೇಳೆ ಓಟದ ಸ್ಪರ್ಧೆ, ಗುಂಡು ಎಸೆತ, ನಡಿಗೆ ಸ್ಪರ್ಧೆ ಹಾಗೂ ಭಕ್ತಿ ಗೀತೆ, ಭಾವಗೀತೆ, ಜಾನಪದ ಗೀತೆ ಮತ್ತು ಏಕಪಾತ್ರ ಅಭಿನಯಗಳನ್ನು ಆಯೋಜಿಸಲಾಗಿತ್ತು.

ಶಿಕ್ಷಣ ಇಲಾಖೆಯ ವಿವಿಧ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ಈಗ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ‘ಎನಿವೇರ್ ರಿಜಿಸ್ಟ್ರೇಷನ್ ಸೇವೆ’ ಆರಂಭ: ಇಲ್ಲಿದೆ ಪ್ರಯೋಜನ

BREAKING : ‘ಮನಿ ಲಾಂಡರಿಂಗ್’ ಕೇಸ್ : ‘ED’ ಯಿಂದ AAP ಶಾಸಕ ‘ಅಮಾನತುಲ್ಲಾ ಖಾನ್’ ಅರೆಸ್ಟ್!

ಏನಿದು ‘ಚುಂಬನ ಕಾಯಿಲೆ’.? ಹೇಗೆ ಹರಡುತ್ತೆ.? ಲಕ್ಷಣಗಳೇನು.? ಚಿಕಿತ್ಸೆ ಹೇಗೆ.? ಇಲ್ಲಿದೆ ಮಾಹಿತಿ.!

Share. Facebook Twitter LinkedIn WhatsApp Email

Related Posts

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

2 Mins Read

BREAKING : ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ : ಗೂಡ್ಸ್ ಆಟೋ-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸಾವು!

1 Min Read

BIG NEWS : ಪತಿ ವಿರುದ್ಧ ನಿರಂತರ ಸುಳ್ಳು ದೂರು ನೀಡುವುದು `ಮಾನಸಿಕ ಕ್ರೌರ್ಯ’ಕ್ಕೆ ಸಮಾನ : ಹೈಕೋರ್ಟ್ ಮಹತ್ವದ ಆದೇಶ

2 Mins Read
Recent News

​ಜಾಗತಿಕ ಹವಾಮಾನ ಏರುಪೇರು: ಈ ವರ್ಷ ‘ಸೂಪರ್ ಎಲ್ ನಿನೋ’ ಭೀತಿ; ಮಾನ್ಸೂನ್ ಮಳೆ ವಿನ್ಯಾಸ ಸಂಪೂರ್ಣ ಏರುಪೇರು ಸಾಧ್ಯತೆ: ವಿಜ್ಞಾನಿಗಳ ಎಚ್ಚರಿಕೆ!

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

BREAKING : ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ : ಗೂಡ್ಸ್ ಆಟೋ-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸಾವು!

​ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣ: ತನಿಖೆಯನ್ನು ಕೈಗೆತ್ತಿಕೊಂಡ CBI: ಎಫ್‌ಐಆರ್ ಮರು-ದಾಖಲು!

State News
KARNATAKA

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

By kannadanewsnow57 KARNATAKA 2 Mins Read

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಮುಂಜಾನೆಯ ಆಫೀಸ್ ಗಡಿಬಿಡಿ ಮತ್ತು ಮನೆಯ ಕೆಲಸಗಳ ಒತ್ತಡದಿಂದಾಗಿ ಅನೇಕರು ಉಪಾಹಾರ (Breakfast) ಸೇವಿಸದೆ…

BREAKING : ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ : ಗೂಡ್ಸ್ ಆಟೋ-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸಾವು!

BIG NEWS : ಪತಿ ವಿರುದ್ಧ ನಿರಂತರ ಸುಳ್ಳು ದೂರು ನೀಡುವುದು `ಮಾನಸಿಕ ಕ್ರೌರ್ಯ’ಕ್ಕೆ ಸಮಾನ : ಹೈಕೋರ್ಟ್ ಮಹತ್ವದ ಆದೇಶ

‘ಕರ್ನಾಟಕ ಯೂಥ್ ಕಾಂಗ್ರೆಸ್’ನಲ್ಲಿ ತಾರಕ್ಕೇರಿದ ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವಿನ ಬಣ ರಾಜಕೀಯ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.