ಬೆಂಗಳೂರು : ಹೆಚ್ಐವಿ ಸೋಂಕಿತನ ಮೇಲೆ ಸಲಿಂಗ ಕಾಮಿ ಅತ್ಯಾಚಾರ ಎಸಗಿ, ಬಳಿಕ ಆತನ ಮನೆಯಲ್ಲಿದ್ದ ನಗದು, ಚಿನ್ನಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಘಟನೆ ನಡೆದಿದೆ.
ಹೌದು ಬೆಂಗಳೂರಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದ್ದು, 56 ವರ್ಷದ ವ್ಯಕ್ತಿಯ ಮೇಲೆ ಶ್ಯಾಮ್ ಪಾಟೀಲ್ ಎನ್ನುವ ಸಲಿಂಗಕಾಮಿ ಅತ್ಯಾಚಾರ ಎಸಗಿದ್ದಾನೆ.ಹೆಚ್ಐವಿ ಸೋಂಕಿತ ವ್ಯಕ್ತಿ ನೆಟ್ ವರ್ಕ್ ಪಾಸಿಟಿವ್ ಪೀಪಲ್ ಎಂಬ ಹೆಸರಿನ ಎನ್ಜಿಒನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಶ್ಯಾಮ್ ಪಾಟೀಲ್ ಎಂಬ ವ್ಯಕ್ತಿ ತನಗೆ ಟಿಬಿ ಕಾಯಿಲೆ ಇದೆ ಎಂದು ಹೆಚ್ಐವಿ ಸೋಂಕಿತ ವ್ಯಕ್ತಿಗೆ ಪರಿಚಯನಾಗಿದ್ದನು.
ಇತ್ತೀಚಿಗೆ ಹೆಚ್ಐವಿ ಸೋಂಕಿತನ ಹೆಂಡತಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ಈ ವಿಚಾರ ತಿಳಿದು ಸಲಿಂಗಿ ಕಾಮಿ ಶ್ಯಾಮ್ ಪಾಟೀಲ್ ಹೆಚ್ಐವಿ ಸೋಂಕಿತನ ಮನೆಗೆ ಬಂದಿದ್ದಾನೆ. ಬಳಿಕ ಜ್ಯೂಸ್ನಲ್ಲಿ ನಿದ್ರೆ ಮಾತ್ರೆ ಹಾಕಿ ಹೆಚ್ಐವಿ ಸೋಂಕಿತನಿಗೆ ನೀಡಿದ್ದಾನೆ. ಅಲ್ಲದೆ, ಹೆಚ್ಐವಿ ಸೋಂಕಿತ ವ್ಯಕ್ತಿಯ ಮುಖಕ್ಕೆ ಸ್ಪ್ರೇ ಹೊಡೆದು ಪ್ರಜ್ಞೆ ತಪ್ಪಿಸಿದ್ದಾನೇ.
ಬಳಿಕ ಶ್ಯಾಮ್ ಪಾಟೀಲ್ ಆತನ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಮನೆಯ ಬೀರುವಿನಲ್ಲಿದ್ದ 88ಗ್ರಾಂ ಚಿನ್ನಭರಣ, 20 ಸಾವಿರ ನಗದು ಮೊಬೈಲ್ ಮೊಬೈಲ್ ದೋಚಿ ಸಲಿಂಗ ಕಾಮಿ ಶ್ಯಾಮ್ ಪಾಟೀಲ್ ಪರಾರಿಯಾಗಿದ್ದಾನೆ. ಬೆಳಿಗ್ಗೆ HIV ಸೊಂಕಿತನಿಗೆ ಎಚ್ಚರವಾದಗ ತನ್ನ ಮೇಲೆ ಅತ್ಯಾಚಾರ ದೌರ್ಜನ್ಯ ನಡೆದಿರುವುದು ಹಾಗೂ ಮನೆಯಲ್ಲಿ ಕಳ್ಳತನ ಆಗಿರುವುದು ಗೊತ್ತಾಗಿದೆ.
ವಿಷಯ ತಿಳಿದ ನಂತರ HIV ಸೊಂಕಿತ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸ್ದಾರೆ. ಆರೋಪಿ ಶ್ಯಾಮ್ ಪಾಟೀಲ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಘಟನೆ ಕುರಿತಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.