ಬೆಂಗಳೂರು : ಕಿರುತೆರೆ ನಟಿ ದಿವ್ಯ ಸುರೇಶ್ ಅವರಿಂದ ಹಿಟ್ ಅಂಡ್ ರನ್ ಆರೋಪ ಕೇಳಿ ಬಂದಿದೆ.ಅತಿ ವೇಗ ಮತ್ತು ನಿರ್ಲಕ್ಷದ ಚಾಲನೆ ಮಾಡಿದ ಆರೋಪ ಕೇಳಿ ಬಂದಿದ್ದು, ಅಪಘಾತದಲ್ಲಿ ಮಹಿಳೆ ಒಬ್ಬರ ಕಾಲು ಮುರಿತವಾಗಿದೆ ಎಂದು ತಿಳಿದುಬಂದಿದೆ.ಈ ಹಿನ್ನೆಲೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 4 ರಂದು ರಾತ್ರಿ 1:30ರ ವೇಳೆಗೆ ಈ ಒಂದು ಅಪಘಾತ ಸಂಭವಿಸಿದ್ದು ಬೆಂಗಳೂರಿನ ಬ್ಯಾಟರಾಯನಪುರ ಎಂಎಂ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಹಿಳೆಯ ಕಾಲು ಮುರಿತವಾಗಿದ್ದು ಅದಾದ ಬಳಿಕ ಸೌಜನ್ಯಕಾದರೂ ನಮ್ಮನ್ನು ಬಂದು ಭೇಟಿಯಾಗಿಲ್ಲ ಎಂದು ಅಪಘಾತಕ್ಕೆ ಈಡಾದ ಮಹಿಳೆಯ ಕುಟುಂಬಸ್ಥರು ದಿವ್ಯಾ ಸುರೇಶ್ ವಿರುದ್ಧ ಆಕ್ರೋಶ ಹೋರ ಹಾಕಿದ್ದಾರೆ.
ಇದೀಗ ಪೊಲೀಸರು ನಟಿ ದಿವ್ಯಾ ಸುರೇಶ್ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದರು. ನಟಿ ದಿವ್ಯ ಸುರೇಶ್ ಕಾರು ಅನ್ನೋದು ಖಚಿತವಾಗಿತ್ತು . ದಿವ್ಯ ಸುರೇಶ್ ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಪೊಲೀಸರ ಮುಂದೆ ದಿವ್ಯ ಸುರೇಶ್ ಹೇಳಿಕೆ ನೀಡಿದ್ದಾರೆ. ತಿರುವಿನಲ್ಲಿ ಅವರು ಬಂದಿದ್ದು ಗೊತ್ತಾಗಿಲ್ಲ ನನ್ನ ಪಾಡಿಗೆ ಹೋಗುತ್ತಿದ್ದೆ ಅವರೇ ರಾಂಗ್ ಆಗಿ ಬಂದಿದ್ದು. ನನಗೆ ಗಾಡಿ ನಿಲ್ಲಿಸಲು ಆಗ್ಲಿಲ್ಲ ಹಾಗಾಗಿ ವಾಪಸ್ ಹೋದೆ ಏನು ಬೇಜಾರ್ ಆಗಿರಲ್ಲ ಸ್ವಲ್ಪ ತಾಗಿರುತ್ತೆ ಅಂದುಕೊಂಡೆ ಅವರ ತಪ್ಪಿನಿಂದಲೇ ಅಪಘಾತ ಆಗಿರುವುದು ನನ್ನ ಗಾಡಿ ಸ್ಪೀಡ್ ಇರಲಿಲ್ಲ ನಾರ್ಮಲ್ ಸ್ಪೀಡ್ ನಲ್ಲಿ ಇತ್ತು. ವಿಚಾರಣೆಗೆ ನಾನು ಸಹಕರಿಸುತ್ತೇನೆ ಎಂದು ತಿಳಿಸಿದರು.








