ಉಡುಪಿ : ಇತ್ತೀಚಿಗೆ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ ಶೆಟ್ಟಿ ಮತ್ತೆ ಇಡೀ ರಾಜ್ಯದ ಭಾರಿ ಆಗ್ರೋಹಕ್ಕೆ ಕಾರಣವಾಗಿದೆ ಇನ್ನು ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ, ಸಿಎಂ ಸಿದ್ದರಾಮಯ್ಯನನ್ನು ಕೊಂದರೆ ಹಿಂದುಗಳಿಗೆ ನೆಮ್ಮದಿ ಇರುತ್ತದೆ ಎಂದು ಕಮೆಂಟ್ ಹಾಕಿದ್ದ ಸದ್ಯ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪೊಲೀಸರು ಕಮೆಂಟ್ ಹಾಕಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಸಂಪತ್ ಸಾಲಿಯಾನ ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲೆಯ ಕಾರ್ಕಳ ಟೌನ್ ಠಾಣೆ ಪೋಲಿಸರು ಇದೀಗ ಕಮೆಂಟ್ ಹಾಕಿದ್ದ ಸಂಪತ್ ನನ್ನು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಸಂಪತ್ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕಾರ್ಕಳದಲ್ಲಿ ಹೋಂ ಗಾರ್ಡ್ ಸಂಪತ್ ಸಾಲಿಯಾನ ಅರೆಸ್ಟ್ ಮಾಡಿ ಇದೀಗ ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.