ಹಾವೇರಿ: ಹಬ್ಬದ ವೇಳೆಯಲ್ಲಿ ಹಿಂದೂಗಳು ಬಾರ್ ನಲ್ಲಿ ಇರುತ್ತಾರೆ ಎಂಬುದಾಗಿ ಮಾಜಿ ಸಚಿವ ಹೆಚ್.ಆಂಜನೇಯ ಹೊಸ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಬೆಂಗಳೂರು ಏರ್ ಪೋರ್ಟ್ ನಲ್ಲಿ ನಮಾಜ್ ಮಾಡಿರೋದನ್ನು ಸಮರ್ಥಿಸಿಕೊಳ್ಳೋ ಭರದಲ್ಲಿ ಇಂತದ್ದೊಂದು ವಿವಾದಾತ್ಮಕ ಹೇಳಿಕೆಯನ್ನು ಮಾಜಿ ಸಚಿವ ಹೆಚ್.ಆಂಜನೇಯ ನೀಡಿದ್ದಾರೆ ಎನ್ನಲಾಗುತ್ತಿದೆ.
ಮುಸ್ಲೀಮರು ಮಾಡಿದ್ದು ಪ್ರಾರ್ಥನೆ, ಕೋಲು ಹಿಡಿದುಕೊಂಡು ಹೋಗಲ್ಲ. ಅವರಲ್ಲಿರೋ ಶ್ರದ್ಧೆಯನ್ನು ನೋಡಿ ನೀವೆಲ್ಲರೂ ಕಲಿತುಕೊಳ್ಳಿ ಎಂಬುದಾಗಿ ತಿಳಿಸಿದರು.
ಮುಸ್ಲಿಮರು ಮೂರ್ಖರಲ್ಲ. ಮಸೀದಿ ಇಲ್ಲ ಅಂತ ಹೇಳಿ ಅಲ್ಲಿ ನಮಾಜ್ ಮಾಡಿರಬಹುದು. ಅದರಲ್ಲೂ ನಾವು ಸಣ್ಣ ತನ ತೋರಿಸಿದ್ರೆ ಹೇಗೆ ಎಂಬುದಾಗಿ ಪ್ರಶ್ನಿಸಿದರು.
ಗಣೇಶ ಹಬ್ಬದಲ್ಲಿ ಬಾರ್ ಗಳು ಪುಲ್ ರಶ್ ಇರುತ್ತವೆ. ಹಬ್ಬದಲ್ಲಿ ಹೂ, ಹಣ್ಣಿನ ವ್ಯಾಪಾರವೂ ಆಗಲ್ಲ. ಅದರ ಬದಲಾಗಿ ಹೈಕ್ಲಾಸ್ ಬಾರ್ ಅಂಡ್ ರೆಸ್ಟೋರೆಂಟ್ ಗಳು ಹೌಸ್ ಪುಲ್ ಆಗಿರುತ್ತವೆ ಎಂಬುದಾಗಿ ಹೇಳಿದ್ದಾರೆ.
ರೈಲ್ವೆ ಕಾಮಗಾರಿ ಹಿನ್ನಲೆ: ಚೆನ್ನೈ, ಬೆಂಗಳೂರು ಎಕ್ಸ್ ಪ್ರೆಸ್ ಸೇರಿ 5 ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಶಿವಮೊಗ್ಗ: ನ.11ರ ನಾಳೆ ಸಾಗರ ಪಟ್ಟಣದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ತಯ | Power Cut








