ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ಹಿಂದೂಪುರ ಹಾಗೂ ಬೆಂಗಳೂರಿನ ನಡುವೆ ಸಂಚರಿಸುತ್ತಿರುವಂತ ಮೆಮು ರೈಲಿನ ಸಮಯವನ್ನು ಪರಿಷ್ಕರಣೆ ಮಾಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ನೈರುತ್ಯ ರೈಲೆ ಇಲಾಖೆಯು, ಹಿಂದುಪುರ-ಕೆಎಸ್ಆರ್ ಬೆಂಗಳೂರು ಮೆಮು ಸಮಯಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದಿದೆ.
09.01.2023 ರಿಂದ ಜಾರಿಗೆ ಬರುವಂತೆ, ರೈಲು ನಂ.06266 ಹಿಂದೂಪುರ-ಕೆಎಸ್ಆರ್ ಬೆಂಗಳೂರು ಮೆಮು ಹಿಂದೂಪುರದಿಂದ 06.30 ಗಂಟೆಗೆ ಬದಲಾಗಿ 06.40 ಗಂಟೆಗೆ ಹೊರಡುತ್ತದೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ 09.10 ಗಂಟೆಗೆ ಬದಲಾಗಿ 09.15 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪುತ್ತದೆ ಎಂದು ತಿಳಿಸಿದೆ.
ಈ ಮಾರ್ಗದಲ್ಲಿ, ರೈಲು, ದೇವರಪಲ್ಲಿ – 06:50/06:51 ಗಂಟೆ, ವಿದುರಾಶ್ವತ – 06:55/06:56 ಗಂಟೆ, ಗೌರಿಬಿದನೂರು-07:08/07:10 ಗಂಟೆ, ಸೋಮೇಶ್ವರ 07:17/07:18 ಗಂಟೆಗೆ , ತೊಂಡೇಬಾವಿ – 07:26/07:27 ಗಂಟೆ, ಮಾಕಳಿದುರ್ಗ – 07:39/07:40 ಗಂಟೆ, ಒಡ್ಡರಹಳ್ಳಿ – 07:48/07:49 ಗಂಟೆ, ದೊಡ್ಡಬಳ್ಳಾಪುರ – 7:59/08:00 ಗಂಟೆ, ರಾಜನಕುಂಟಿ – 80.09/08:10 ಗಂಟೆ, ಯಲಹಂಕ – 08:23/08:25 ಗಂಟೆ, ಕೊಡಿಗೇಹಳ್ಳಿ – 08:33/08:34 ಗಂಟೆ, ಯಶವಂತಪುರ – 08:50/08:51 ಗಂಟೆ ಮತ್ತು ಮಲ್ಲೇಶ್ವರಂ – 08:55 /08:56 ಗಂಟೆ ಗೆ ಆಗಮಿಸುತ್ತದೆ/ ನಿರ್ಗಮಿಸುತ್ತದೆ ಎಂದು ಹೇಳಿದೆ.
ಸಂಕ್ರಾತಿ ಹಬ್ಬ ಯಾವಾಗ? ಆಚರಣೆಗೆ ಹೇಗೆ ಮಾಡೋದು? ಅದರ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಶೀಘ್ರವೇ ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನು ಸ್ವರೂಪ – ಸಿಎಂ ಬೊಮ್ಮಾಯಿ ಘೋಷಣೆ