ಬೆಂಗಳೂರು: ಮುಸ್ಲಿಂ ಸಂಘಟನೆಗಳಿಗೆ ಹಿಂದೂ ಸಂಘಟನೆಗಳು ಟಕ್ಕರ್ ಕೊಡಲು ಮುಂದಾಗಿದ್ದಾರೆ. ಶಿಕ್ಷಣ ಇಲಾಖೆ ವಿರುದ್ಧ ಹೊಸ ಸಮರ ಸಾರಿದೆ.
BIGG NEWS : ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ರಹಸ್ಯ ಸಂಚಾರ : ಡಿ.ಕೆ. ಶಿವಕುಮಾರ್ ಹೇಳಿದ್ದೇನು ಗೊತ್ತಾ?
ಉರ್ದು ಶಾಲೆಯಂತೆ ರಾಜ್ಯದಲ್ಲಿ ಹಿಂದೂ ಮಕ್ಕಳಿಗೆ ಸಂಸ್ಕೃತ ಶಾಲೆಗಳನ್ನು ಆರಂಭಿಸುವುದಕ್ಕೆ ಬೇಡಿಕೆಯಿಟ್ಟಿವೆ. ಹಾಗಾದರೆ ಮುಸ್ಲಿಂ ಸಮುದಾಯದ ಮಕ್ಕಳಿಗೆ ಉರ್ದು ಹಾಗೂ ಅರೆಬಿಕ್ ಶಾಲೆಗಳು ಇರುವಂತೆ ರಾಜ್ಯದಲ್ಲಿ ಸರ್ಕಾರದಿಂದ ಸಂಸ್ಕೃತ ಶಾಲೆಗಳು ಓಪನ್ ಆಗುತ್ತಾ? ಎಂಬ ಪ್ರಶ್ನೆ ಕಾಡತೊಡಗಿದೆ.
BIGG NEWS : ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ರಹಸ್ಯ ಸಂಚಾರ : ಡಿ.ಕೆ. ಶಿವಕುಮಾರ್ ಹೇಳಿದ್ದೇನು ಗೊತ್ತಾ?
ಈ ಹಿನ್ನೆಲೆಯಲ್ಲಿ ಹಿಂದೂ ಸಮುದಾಯದ ಮಕ್ಕಳಿಗೂ ಸಂಸ್ಕೃತ ಶಾಲೆಗಳ ಆರಂಭಕ್ಕೆ ಒತ್ತಾಯ ಕೇಳಿಬಂದಿದೆ. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕಗಳಲ್ಲಿಯೂ ಸಂಸ್ಕೃತ ಶಾಲೆಗಳನ್ನ ಆರಂಭಿಸುವಂತೆ ಮನವಿ ಮಾಡಲಾಗಿದೆ. ಇದೇ ವೇಳೆ, ಹಿಂದೂ ಮಕ್ಕಳಿಗೆ ಶಿಕ್ಷಣ ಇಲಾಖೆ ಶಾಲೆಗಳನ್ನ ಆರಂಭಿಸುವಂತೆ ಅಭಿಯಾನವನ್ನೂ ಕೈಗೊಳ್ಳಲಾಗಿದೆ. ಸಂಸ್ಕೃತ ಭೋದನೆ ಜೊತೆಗೆ ಹಿಂದೂ ಧರ್ಮದ ಪರಿಚಯ ಸಂಸ್ಕೃತಿ ಪರಿಚಯಿಸಬೇಕು. ಹಿಂದೂ ಹಬ್ಬಗಳು, ರಾಮಾಯಣ, ಭಗವದ್ಗೀತೆ, ಧ್ಯಾನ, ಪೂಜಾ ಪುನಸ್ಕಾರ, ಕುಂಕುಮ, ಬಳೆ, ತಿಲಕದ ಜ್ಞಾನ ನೀಡುವುದು ಇದರ ಉದ್ದೇಶವಾಗಿದೆ.