ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಅಲಂಗಾರು ಬಳಿ ಬೆಳ್ಳಂಬೆಳಗ್ಗೆ ಅಕ್ರಮ ಕಸಾಯಿ ಖಾನೆ ಗೆ ಹಿಂದೂ ಜಾಗರಣಾ ವೇದಿಕೆ ದಾಳಿ ನಡೆಸಿದ್ದಾರೆ.
ಅಕ್ರಮ ಕಸಾಯಿ ಖಾನೆ ಮೇಲೆ ಬೆಳಿಗ್ಗೆ 4 ಗಂಟೆಗೆ ಹಿಂಜಾವೇ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ವಧೆ ಮಾಡಲು ತಂದಿದ್ದ 4 ಗೋವು ಮತ್ತು ಭಾರೀ ಪ್ರಮಾಣ ಮಾಂಸ, ದನದ ತಲೆ ಭಾಗಗಳು ಪತ್ತೆಯಾಗಿವೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಕೆ.ಜಿ ಗಟ್ಟಲೇ ಮಾಂಸ ಸಹಿತ ಕ್ಲಾರಿನ್ ಅಲ್ವಿನ್ ಮತ್ತು ಗಿಲ್ಬರ್ಟ್ ಮಿರಂದ ಎಂಬ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.