ಚಿತ್ರದುರ್ಗ : ಹಿಂದೂ ಧರ್ಮದ ಕುರಿತು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯ ತರಳಬಾಳು ಮಠದ ಪಂಡಿತರಾಧ್ಯ ಶ್ರೀಗಳು ವಿವಾದದ ಹೇಳಿಕೆ ನೀಡಿದ್ದು, ಹಿಂದೂ ಎನ್ನುವುದು ಒಂದರ್ಥದಲ್ಲಿ ಧರ್ಮವೇ ಅಲ್ಲ ಹಿಂದೂ ಎನ್ನುವುದು ಅನೈತಿಕ ಮತ್ತು ಅನಾಚಾರವನ್ನು ಒಳಗೊಂಡಿದೆ ಎಂದು ವಿವಾದದ ಹೇಳಿಕೆ ನೀಡಿದ್ದಾರೆ.
ಇಂದು ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಒಂದರ್ಥದಲ್ಲಿ ಧರ್ಮವೇ ಅಲ್ಲ. ಸಾಣೆಹಳ್ಳಿ ತರಳಬಾಳು ಮಠದ ಪಂಡಿತರಾಧ್ಯ ಶ್ರೀಗಳು ಈ ಒಂದು ಹೇಳಿಕೆ ನೀಡಿದ್ದು, ಹಿಂದೂ ಎಂಬುವುದು ಅನೈತಿಕ ಮತ್ತು ಅನಾಚಾರ ಒಳಗೊಂಡಿದೆ. ಅಹಿಂಸಾ ಜೀವನ ನಡೆಸಬೇಕು ಎಂದು ಬಸವಣ್ಣ ಹೇಳಿದ್ದರು. ಸಿಂಧೂ ನದಿಯ ಬೈಲಲ್ಲಿ ಇರುವವರು ಕೂಡ ಎಲ್ಲರೂ ಹಿಂದುಗಳು ಎಂದರು.
ನಮ್ಮದು ಸ್ವತಂತ್ರ ಲಿಂಗಾಯತ ಧರ್ಮ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವೇ ಅಲ್ಲ. ಮಲ್ಲಿಕಾರ್ಜುನ ಸ್ವಾಮೀಜಿ ಬಸವ ತತ್ವದ ನಿಷ್ಠರಾಗಿದ್ದರು. ಈಗಿನ ದಿನಗಳಲ್ಲಿ ಸ್ವಾಮೀಜಿಗಳೆಲ್ಲರೂ ನಿಷ್ಠೆಯನ್ನು ಬಿಟ್ಟಿದ್ದೇವೆ. ಬದಲಾಗಬೇಕಿರುವುದು ಭಕ್ತರಲ್ಲ ಸ್ವಾಮೀಜಿಗಳು ಎಂದು ಅವರು ತಿಳಿಸಿದರು.