ಕಾರವಾರ: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡವು ಹೊನ್ನಾವರದ ನ್ಯಾಯಾಲಯಕ್ಕೆ ಸಲ್ಲಿಸಿರುವ ʼಬಿʼ ರಿಪೋರ್ಟ್ನ್ನು ಆಕ್ಷೇಪಿಸಿ ಮೇಸ್ತಾ ತಂದೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
HEALTH TIPS: ಆರೋಗ್ಯಕ್ಕೆ ಯಾವ ಮೊಟ್ಟೆ ಬೆಸ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ ತನಿಖಾ ತಂಡವು ಅಕ್ಟೋಬರ್ 6 ರಂದು ಹೊನ್ನಾವರದ ನ್ಯಾಯಾಲಯಕ್ಕೆ ʼಬಿʼ ರಿಪೋರ್ಟ್ ಸಲ್ಲಿಕೆ ಮಾಡಿತು. ಇದನ್ನು ಆಕ್ಷೇಪಿಸಿ ಪರೇಶ್ ಮೇಸ್ತಾ ತಂದೆ ಕಮಾಲಕ ಮೇಸ್ತಾ ಅವರು ಹೊನ್ನಾವರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿ ಆಕ್ಷೇಪಣ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
HEALTH TIPS: ಆರೋಗ್ಯಕ್ಕೆ ಯಾವ ಮೊಟ್ಟೆ ಬೆಸ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ
ಕಳೆದ ಅಕ್ಟೋಬರ್ 6 ರಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದ ಸಿಬಿಐ ತನಿಖಾ ತಂಡ, ಪರೇಶ್ ಮೇಸ್ತಾ ಕೊಲೆ ನಡೆದಿಲ್ಲ. ಅದು ಸಹಜ ಸಾವು. ಆರೋಪಿತರನ್ನು ದೋಷಮುಕ್ತ ಮಾಡಬಹುದೆಂದು ನ್ಯಾಯಾಲಯಕ್ಕೆ ವರದಿ ನೀಡಿತ್ತು.
ಬಿ ರಿಪೋರ್ಟ್ ಕುರಿತು ಆಕ್ಷೇಪಣೆ ಮಾಡಿದ್ದ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ, ತನ್ನ ಮಗನ ಸಾವು ಸಹಜವಾಗಿದ್ದಲ್ಲ. ಅವನನ್ನು ಕೊಲೆ ಮಾಡಿ, ಸಾಕ್ಷಿ ನಾಶ ಮಾಡಲಾಗಿದೆ ಎಂದು ಆರೋಪಿಸಿದ್ದರು.