ಹಿಮಾಚಲ ಪ್ರದೇಶ : ಕಳೆದ 24 ಗಂಟೆಗಳಿಂದ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಸೋಮವಾರದಂದು ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, 150 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
BIGG NEWS: ಮಂಕಿಪಾಕ್ಸ್ ಗೂ ಮತ್ತೆ ಚಿಕನ್ ಪಾಕ್ಸ್ ಗೂ ವ್ಯತ್ಯಾಸವೇನು? ಬಗ್ಗೆ ವೈದ್ಯರ ಹೇಳೋದೇನು ಗೊತ್ತಾ?
ಲಾಹೌಲ್-ಸ್ಪಿತಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (ಡಿಇಒಸಿ) ಪಡೆದ ಮಾಹಿತಿಯಂತೆ, ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಿಕ್ಕಿಬಿದ್ದ ಜನರನ್ನು ಸ್ಥಳಾಂತರಿಸಲು ಆಡಳಿತ, ಪೊಲೀಸ್ ಮತ್ತು ಗಡಿ ರಸ್ತೆಗಳ ಸಂಸ್ಥೆ (ಬಿಆರ್ಒ) ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿದೆ ಎನ್ನಲಾಗುತ್ತಿದೆ.
ಲಾಹೌಲ್ ಉಪ ವಿಭಾಗದ ಸುಮ್ಡೋ-ಕಾಜಾ-ಗ್ರಾಂಫೂ (ಎಸ್ಕೆಜಿ) ರಸ್ತೆಯು ಹಠಾತ್ ಪ್ರವಾಹದಿಂದಾಗಿ ನಿರ್ಬಂಧಿಸಲ್ಪಟ್ಟಿರುವುದರಿಂದ ಜನರು ಚತ್ರು ಮತ್ತು ಡೋರ್ನಿ ಮೋರ್ಹ್ ಬಳಿ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮುಂದಿನ 48 ಗಂಟೆಗಳಲ್ಲಿ ಲಾಹೌಲ್-ಸ್ಪಿತಿ ಮತ್ತು ಕಿನ್ನೌರ್ನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಎರಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಠಾತ್ ಪ್ರವಾಹ ಸಂಭವಿಸಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.
BIGG NEWS : 2024ರ ಚುನಾವಣೆಯಲ್ಲೂ ‘ಮೋದಿ’ಯೇ ಪ್ರಧಾನಿ ಅಭ್ಯರ್ಥಿ ; ಅಮಿತ್ ಶಾ ಘೋಷಣೆ