ಹಿಮಾಚಲ : ಹಿಮಾಚಲ ಪ್ರದೇಶ ಸರ್ಕಾರವು 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಉಚಿತ ಬೂಸ್ಟರ್ ಡೋಸ್ ನೀಡಲು ಮುಂದಾಗಿದೆ. ಡಿಸೆಂಬರ್ 23 ರಿಂದ 28, 2022 ರವರೆಗೆ ಶಿಮ್ಲಾದಲ್ಲಿ ಡೋಸ್ ವಿತರಣೆ ನಡೆಯಲಿದೆ.
ಡಿ.23 ರಿಂದ 28ರವರೆಗೆ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ ಮತ್ತು ಇಂದಿರಾಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನವರಿಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಶಿಮ್ಲಾದ ಮುಖ್ಯ ವೈದ್ಯಾಧಿಕಾರಿ ಪ್ರಕಟಿಸಿದ್ದಾರೆ.
ಜಪಾನ್, ಅಮೇರಿಕಾ, ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಏಕಾಏಕಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಜೊತೆಗೆ ದೇಶದಲ್ಲಿ ಚೀನಾದಲ್ಲಿ ಉಲ್ಬಣಗೊಂಡಿರುವ ಓಮಿಕ್ರಾನ್ ರೂಪಾಂತರ BF.7ನ 4 ಕೇಸ್ ಗಳು ಪತ್ತೆಯಾಗಿವೆ. ಸದ್ಯ ದೇಶದಲ್ಲಿ ಕೋವಿಡ್ ಕೇಸ್ ಗಳು ಕಡಿಮೆ ಇದೆ.
ಇದರ ಜೊತೆಗೆ ಮುಂಜಾಗೃತ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷೆ ಆರಂಬ ಮಾಡಲಾಗಿದೆ.