ಶಿಮ್ಲಾ (ಹಿಮಾಚಲ ಪ್ರದೇಶ) : ಬಿಜೆಪಿ ಆಳ್ವಿಕೆಯ ಹಿಮಾಚಲ ಪ್ರದೇಶದಲ್ಲಿ ಇಂದು ಎಲ್ಲ 68 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಮತದಾನ ಪ್ರಾರಂಭವಾಗಲಿದೆ.
ಚುನಾವಣೆಯ ರಾಜಕೀಯ ಪ್ರಚಾರಗಳು ನವೆಂಬರ್ 10 ರಂದು ಮುಕ್ತಾಯಗೊಂಡವು. ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಮತದಾರರಿಗೆ ತಮ್ಮ ಮತವನ್ನು ಚಲಾಯಿಸಲು ವೇದಿಕೆಯನ್ನು ಸಿದ್ಧಪಡಿಸಲಾಯಿತು. ಇಂದು ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ರಾಜ್ಯದ ಎಲ್ಲಾ 68 ಸ್ಥಾನಗಳಿಗೆ 412 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 55 ಲಕ್ಷ ಮತದಾರರು ರಾಜ್ಯ ವಿಧಾನ ಸಭೆಗೆ ಶಾಸಕರನ್ನು ಆಯ್ಕೆ ಮಾಡುವ ಹೊಣೆ ಹೊತ್ತಿದ್ದಾರೆ.
BIG NEWS: ಭಾರತದಲ್ಲೂ ʻಟ್ವಿಟರ್ ಬ್ಲೂʼ ಸೇವೆ ಆರಂಭ: ಬಳಕೆದಾರರಿಗೆ ತಿಂಗಳಿಗೆ 719 ರೂ. ಹೊರೆ | Twitter Blue