ಬೆಂಗಳೂರು: ರಾಜ್ಯದಲ್ಲಿ 32 ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಈಗಾಗಲೇ ಸ್ಥಾಪಿತವಾಗಿದೆ. ಉನ್ನತ ಶಿಕ್ಷಣಕ್ಕಾಗಿ ಈ ವಿವಿಗಳಲ್ಲಿ ವ್ಯಾಸಂಗಕ್ಕಾಗಿ ಪ್ರವೇಶ ಪಡೆದುಕೊಂಡ ನಮ್ಮ ರಾಜ್ಯದ ಮಕ್ಕಳು ಈಗ ಪರದಾಡುವಂತಹ ದು ಸ್ಥಿತಿಗೆ ತಲುಪಿರುವುದು ನಿಜಕ್ಕೂ ಕಳವಳಕಾರಿಯಾದಂತಹ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ತಮ್ಮ ಪತ್ರದಲ್ಲಿ ” ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಈಗಾಗಲೇ ಮಂಜೂರಾಗಿರುವ 4,709 ಬೋಧಕ ಹುದ್ದೆಗಳು, 9317 ಬೋದಕೇತರ ಹುದ್ದೆಗಳು ಇವೆ. ಆದರೆ ಇದುವರೆಗೂ ಕೇವಲ 1986 ಬೋಧಕ ಹಾಗೂ 2989 ಬೋಧಕೇತರ ಹುದ್ದೆಗಳು ಮಾತ್ರ ಭರ್ತಿಯಾಗಿದೆ. 9051 ಹುದ್ದೆಗಳನ್ನು ಅನೇಕ ವರ್ಷಗಳಿಂದ ನೇಮಕಾತಿ ಮಾಡಿಕೊಳ್ಳದೆ ಇರುವುದು ಸರ್ಕಾರದ ಅಂಕಿ ಅಂಶಗಳು ತೋರಿಸುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿಯೂ ಸಾರ್ವಜನಿಕವಾಗಿ ಸಹ ವರದಿಯಾಗಿದೆ.
ರಾಜ್ಯದಲ್ಲಿನ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಣಾರ್ಥಿಗಳ ಪರಿಸ್ಥಿತಿ ತೀರ ಹದೆಗೆಟ್ಟು , ಸರ್ಕಾರಕ್ಕೆ ಇಡಿಶಾಪ ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ” ಎಂದು ಮುಖ್ಯಮಂತ್ರಿ ಚಂದ್ರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ಘೋಷಿಸಲ್ಪಟ್ಟ 7 ನೂತನ ವಿಶ್ವವಿದ್ಯಾನಿಲಯಗಳಲ್ಲಿಯೂ ಸಹ 467 ಬೋಧಕ ಹುದ್ದೆಗಳು ಹಾಗೂ 1787 ಬೋಧಕೇತರ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದ್ದರೂ ಸಹ ಇದುವರೆವಿಗೂ ಸರ್ಕಾರ ಒಂದು ಹುದ್ದೆಯನ್ನು ಸಹ ಭರ್ತಿ ಮಾಡಿಕೊಂಡಿಲ್ಲದಿರುವುದು ತಮ್ಮ ನಿರ್ಲಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ.
ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಯಾವ ರೀತಿಯ ಅಸಡ್ಡೆ ಹಾಗೂ ಉದಾಸೀನ ಭಾವನೆಯನ್ನು ಹೊಂದಿದೆ ಎಂಬುದನ್ನು ಈ ಬೇಜವಾಬ್ದಾರಿತನ ನಡೆಯಿಂದ ಎದ್ದು ಕಾಣುತ್ತದೆ. ರಾಜ್ಯದ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆದುಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡುವ, ತನ್ನ ಬೌದ್ಧಿಕ ಸಾಮರ್ಥ್ಯದಿಂದ ದೇಶದ ಆಸ್ತಿಯಾಗುವ ಎಲ್ಲ ಅವಕಾಶಗಳನ್ನು ಸರ್ಕಾರವು ಬುಡಮಟ್ಟದಲ್ಲಿಯೇ ಇಚುಕಿ ಹಾಕುತ್ತಿರುವುದು ಸರ್ಕಾರವು ಮುಂದಿನ ಪೀಳಿಗೆಗಳಿಗೆ ಮಾಡುವ ಮಹಾ ದ್ರೋಹವೇ ಆಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಬಾಕಿ ಇರುವ ನೇಮಕಾತಿಗಳನ್ನು ಮಾಡಬೇಕು ” ಎಂದು ತಮ್ಮ ಪತ್ರದಲ್ಲಿ ಆ ಗೃಹಪಡಿಸಿದ್ದಾರೆ.
GOOD NEWS: ರಾಜ್ಯದ ಜನತೆಗೆ ಗುಡ್ ನ್ಯೂಸ್: ಈ ಬಾರಿ ಬೇಸಿಗೆಯಲ್ಲೂ ಸಮರ್ಪಕ ‘ವಿದ್ಯುತ್ ಪೂರೈಕೆ’
BREAKING : ರಾಮನಗರದಲ್ಲಿ ಭೀಕರ ಕೊಲೆ : ‘ನ್ಯೂ ಇಯರ್’ ಪಾರ್ಟಿ ವೇಳೆ ವ್ಯಕ್ತಿಯನ್ನು ಕೊಂದು ಬಾವಿಗೆ ಎಸೆದ ದುರುಳರು!