ಹೈದರಾಬಾದ್: ಪ್ರೀಮಿಯರ್ ಶೋ ವೇಳೆಯಲ್ಲಿ ಕಾಲ್ತುಳಿತ ಘಟನೆ ಸಂಬಂಧ 1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿ, ನಟ ಅಲ್ಲು ಅರ್ಜುನ್ ನಿವಾಸದ ಬಳಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಹೀಗಾಗಿ ನಟ ಅಲ್ಲು ಅರ್ಜುನ್ ಮನೆ ಮುಂದೆ ಹೈಡ್ರಾಮಾವೇ ನಡೆಯುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವಣ ಉಂಟಾಗಿದೆ.
ಹೈದರಾಬಾದಿನ ಜ್ಯುಬಿಲಿ ಹಿಲ್ಸ್ ನಲ್ಲಿ ಇರುವಂತ ನಟ ಅಲ್ಲು ಅರ್ಜುನ್ ನಿವಾಸದ ಮುಂದೆ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ ರೇವತಿ ಕುಟುಂಬಕ್ಕೆ 1 ಕೋಟಿ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ಓಯು ಜೆಎಸಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನಾಕಾರರನ್ನು ನಟ ಅಲ್ಲು ಅರ್ಜುನ್ ಮನೆಯ ಸಿಬ್ಬಂದಿಗಳು ತಡೆದಿದ್ದಾರೆ. ಈ ವೇಳೆ ರೊಚ್ಚಿಗೆದ್ದಂತ ಪ್ರತಿಭಟನಾಕಾರರು ಮನೆಯ ಮುಂದಿನ ಹೂಕುಂಡವನ್ನು ಹೊಡೆದು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಅಲ್ಲು ಅರ್ಜುನ್ ಮನೆಯ ಸಿಬ್ಬಂದಿಗಳ ಮೇಲೂ ದಾಳಿಯನ್ನು ಪ್ರತಿಭಟನಾನಿರತರು ಮಾಡಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ನಟ ಅಲ್ಲು ಅರ್ಜುನ್ ನಿವಾಸದ ಬಳಿಯಲ್ಲಿ ಬಿಗುವಿನ ವಾತಾವರಣದಿಂದ ಕೂಡಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
Attack and stone pelting at the house of #AlluArjun.
It seems Congress is taking personal revenge against him… Truly shameful, state-sponsored goondaism. pic.twitter.com/u5CQz6ZQdc
— Mr Sinha (@MrSinha_) December 22, 2024
BREAKING: ಪಡಿತರ ಪಡೆಯಲು ಎಲ್ಲರ ‘ವೇತನ ಪ್ರಮಾಣಪತ್ರ’ ಅಗತ್ಯವಿಲ್ಲ: ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ
BREAKING : ಕಲಬುರ್ಗಿಯ ‘ಹೈಟೆಕ್ ಜಯದೇವ ಹೃದ್ರೋಗ’ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ CM ಸಿದ್ದರಾಮಯ್ಯ