ಬೆಳ್ತಂಗಡಿ: ಪೊಲೀಸ್ ಇನ್ಸ್ ಪೆಕ್ಟರಿಗೆ ಧಮ್ಕಿ ಪ್ರಕರಣದಲ್ಲಿ ಶಾಸಕ ಹರೀಶ್ ಪೂಂಜ ನಿಸಾವದ ಮುಂದೆ ಇಂದು ಹೈಡ್ರಾಮಾವೇ ನಡೆಯಿತು. ಬಿಜೆಪಿಯ ನಾಯಕರು ಸೇರಿದಂತೆ ಕಾರ್ಯಕರ್ತರ ದಂಡೇ ಅವರನ್ನು ಬಂಧಿಸದಂತೆ ಒತ್ತಾಯಿಸಿತ್ತು. ಜೊತೆಗೆ ಶಾಸಕ ಹರೀಶ್ ಪೂಂಜಾ ಮೂರು ದಿನ ಕಾಲಾವಕಾಶ ಕೋರಿದ್ದರಿಂದ, ಅವಕಾಶ ನೀಡಿ ಪೊಲೀಸರು ನೋಟಿಸ್ ನೀಡಿ, ಬಂಧಿಸದೇ ತೆರಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ಠಾಣೆಯ ಪಿಎಸ್ಐಗೆ ಧಮ್ಕು ಹಾಕಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಎದುರಿಸುತ್ತಿದ್ದರು. ಈ ಸಂಬಂಧ ಪಿಎಸ್ಐ ನೀಡಿದಂತ ದೂರಿನಲ್ಲಿ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಇಂದು ಶಾಸಕ ಹರೀಶ್ ಪೂಂಜ ಅವರನ್ನು ಪೊಲೀಸರು ಬಂಧಿಸಲಿದ್ದಾರೆ ಎನ್ನಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಬೆಳ್ತಂಗಡಿಯ ಗಾರ್ಡಿಯ ಗ್ರಾಮದ ನಿವಾಸದ ಮುಂದೆ ಹೈಡ್ರಾಮವೇ ಏರ್ಪಟ್ಟಿತ್ತು.
ಇದರ ಮುಧ್ಯೆ ಶಾಸಕ ಹರೀಶ್ ಪೂಂಜ ವಿಚಾರಣೆಗೆ ಹಾಜರಾಗೋದಕ್ಕೆ ಕಾಲಾವಕಾಶವನ್ನು ಕೋರಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು 3 ದಿನಗಳ ಕಾಲಾವಕಾಶ ನೀಡುವಂತ ನೋಟಿಸ್ ನೀಡಿ, ಅವರನ್ನು ಬಂಧಿಸದೇ ಮನೆಯಿಂದ ತೆರಳಿದ್ದಾರೆ. ಈ ಮೂಲಕ ಶಾಸಕ ಹರೀಶ್ ಪೂಂಜ ನಿವಾಸದ ಮುಂದಿನ ಹೈಡ್ರಾಮಕ್ಕೆ ತೆರೆ ಬಿದ್ದಂತೆ ಆಗಿದೆ.
BIG NEWS: ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಎಂದ ‘ರಾಹುಲ್ ಗಾಂಧಿ’ ವಿರುದ್ಧ ‘JDS’ ದೂರು