ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನೇಮಿಸಿರುವಂತ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ.
ಈ ಕುರಿತಂತೆ 71 ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿ, ಇತ್ಯರ್ಥಪಡಿಸಿದೆ. ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ 71 ರಿಟ್ ಅರ್ಜಿ ಸಲ್ಲಿಸಿದ್ದವುಗಳನ್ನು ಇತ್ಯರ್ಥ ಪಡಿಸಲಾಗಿದೆ.
ಅವಧಿ ಮುಗಿದ ನಗರಸಭೆ, ಪುರಸಭೆಗಳಿಗೆ ಸರ್ಕಾರ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಕ್ಷೇತ್ರ ಪುನರ್ವಿಂಗಡನೆಗೆ 150 ದಿನ ಬೇಕಿರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿತ್ತು. ಸಂವಿಧಾನದ 243(ಯು) ನಂತೆ 5 ವರ್ಷ ಅವಧಿ ನಿಗದಿಯಾಗಿದೆ. ಅವಧಿ ಮುಗಿದ ಮೇಲೆ ಹಾಲಿ ಸದಸ್ಯ, ಅಧ್ಯಕ್ಷರನ್ನು ಮುಂದುವರಿಸಲಾಗದು. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಲಾಗಿದೆ ಎಂಬುದಾಗಿ ಸರ್ಕಾರ ವಾದಿಸಿತ್ತು.
ಸರ್ಕಾರದ ಪರ ಹೆಚ್ಚುವರಿ ಎಜಿ ಪ್ರತಿಮಾ ಹೊನ್ನಾಪುರ ವಾದಿಸಿದರು. ಈ ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಆಡಳಿತಾಧಿಕಾರಿ ನೇಮಕದಲ್ಲಿ ಮಧ್ಯಪ್ರವೇಶಿಸಲು ನಕಾರ ವ್ಯಕ್ತಪಡಿಸಿದೆ.
CRIME NEWS: ಕೌಟುಂಬಿಕ ಕಲಹದಿಂದ ಪತ್ನಿ ಹತ್ಯೆಗೈದು ಪತಿಯೂ ಆತ್ಮಹತ್ಯೆ
ನೀವು ಈ ತಪ್ಪು ಮಾಡ್ತಿದ್ದೀರಾ.? ಎಚ್ಚರ, ನಿಮ್ಮ ‘IRCTC’ ಖಾತೆ ಬ್ಯಾನ್ ಆಗುತ್ತೆ! 3 ಕೋಟಿಗೂ ಹೆಚ್ಚು ಖಾತೆ ನಿರ್ಬಂಧ








