ಬೆಂಗಳೂರು: ಮೌಖಿಕವಾಗಿ ವಿಚಾರಣೆ ಸೇರಿದಂತೆ ಇನ್ನಿತರೆ ಕಾರಣಗಳಿಗೆ ರೌಡಿಶೀಟರ್ ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಆದರೇ ರೌಡಿ ಶೀಟರ್ ಗಳನ್ನು ಪೊಲೀಸ್ ಠಾಣೆಗೆ ಎಸ್ ಎಂ ಎಸ್, ವಾಟ್ಸ್ ಆಪ್ ಮೂಲಕ ಮಾಹಿತಿ ನೀಡಿ, ಕರೆಸುವುದನ್ನು ಕಡ್ಡಾಯಗೊಳಿಸಿ ಮಹತ್ವದ ಆದೇಶ ಮಾಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ಧ ನ್ಯಾಯಪೀಠವು, ರೌಡಿಶೀಟರ್ ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಹೈಕೋರ್ಟ್ ಪ್ರಕ್ರಿಯೆ ನಿಗದಿ ಪಡಿಸಿ ಮಹತ್ವದ ಆದೇಶ ಮಾಡಿದೆ.
ಎಸ್ ಎಂ ಎಸ್, ವಾಟ್ಸ್ ಆಪ್ ಮೂಲಕ ಪೊಲೀಸ್ ಠಾಣೆಗೆ ಕರೆಸಬಹುದು. ಪೊಲೀಸ್ ಠಾಣೆಗಳಿಗೆ ರೌಡಿಶೀಟರ್ ಗಳು ತಮ್ಮ ಮೊಬೈಲ್ ನಂಬರ್ ನೀಡಬೇಕು. ಮೌಖಿಕವಾಗಿ ಕರೆಯುವ ಬದಲು ಎಸ್ ಎಂ ಎಸ್, ವಾಟ್ಸ್ ಆಪ್ ಸಂದೇಶ ನೀಡಬೇಕು ಎಂಬುದಾಗಿ ಹೈಕೋರ್ಟ್ ಸೂಚಿಸಿದೆ.
ಒಂದು ವೇಳೆ ಎಸ್ಎಂಎಸ್, ವಾಟ್ಸ್ ಆಪ್ ನಲ್ಲಿ ಸೂಚಿಸಿದರೂ ಪೊಲೀಸ್ ಠಾಣೆಗೆ ರೌಡಿ ಶೀಟರ್ ಗಳು ಬಾರದೇ ಇದ್ದರೇ ಮನೆಗೆ ಪೊಲೀಸರು ತೆರಳಬಹುದು. ಸರ್ಕಾರ ಕಾನೂನು ರೂಪಿಸುವವರೆಗೂ ಈ ಪ್ರಕ್ರಿಯೆ ಪಾಲಿಸುವಂತೆ ಸೂಚಿಸಿದೆ. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದರೇ ಈ ಆದೇಶದ ರಕ್ಷಣೆ ಸಿಗುವುದಿಲ್ಲವೆಂಬುದಾಗಿಯೂ ಹೈಕೋರ್ಟ್ ಸ್ಪಷ್ಟ ಪಡಿಸಿದೆ. ಅಲ್ಲದೇ ದಂಡಾಧಿಕಾರಿಯ ಅಧಿಕಾರವನ್ನು ಈ ಆದೇಶ ಕುಂಠಿತಗೊಳಿಸುವುದಿಲ್ಲ ಎಂಬುದಾಗಿಯೂ ತಿಳಿಸಿದೆ.
ಅಂದಹಾಗೇ ರೌಡಿಶೀಟರ್ ಸುನೀಲ್ ಕುಮಾರ್ ಈ ಸಂಬಂಧ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಸುನೀಲ್ ಕುಮಾರ್ ಆಲಿಯಾಸ್ ಸೈಲೆಂಟ್ ಸುನೀಲ್ ರಿಟ್ ಅರ್ಜಿ ವಿಚಾರಣೆಯ ವೇಳೆಯಲ್ಲಿ ಈ ಆದೇಶವನ್ನು ಹೈಕೋರ್ಟ್ ಮಾಡಿದೆ.
ಅಲೋಕ್ ಕುಮಾರ್ ಹೆಚ್ಚುವರಿ ಆಯುಕ್ತರಾಗಿದ್ದಾಗ ಸುನೀಲ್ ಕರೆಸಿ ಎಚ್ಚರಿಕೆ ನೀಡಿದ್ದರು. ಅಲೋಕ್ ಕುಮಾರ್ ಎಚ್ಚರಿಕೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದ್ವೇಷ ಭಾಷಣ ಕೇಸಲ್ಲಿ ‘RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್’ಗೆ ನಿರೀಕ್ಷಣಾ ಜಾಮೀನು ಮಂಜೂರು
ಹೀಗಿದೆ ಇಂದು ಬೆಳಗಾವಿಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ








