ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿದ್ದ ಮಾತ್ರಕ್ಕೆ ಅವರಿಗೆ ಏನು ಕಿರೀಟ ಇರಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಡಿಕೆ ಶಿವಕುಮಾರ್ ಅವರ ಕುರಿತು ಹೇಳಿಕೆ ನೀಡಿದ್ದರು. ಇದೇ ವಿಚಾರವಾಗಿ ಮಾಜಿ ಸಂಸದ ಡಿಕೆ ಸುರೇಶ ರವರು ಕೆ ಎನ್ ರಾಜಣ್ಣ ಅವರ ಹೇಳಿಕೆಗೆ ತಿರುಗೇಟು ನೀಡಿದ್ದು, ಕೆಪಿಸಿಸಿ ಅಧ್ಯಕ್ಷರಿಗೆ ಕೊಂಬು ಇರುತ್ತೋ ಇಲ್ಲವೋ ಎನ್ನುವುದು ಹೈಕಮಾಂಡ್ ಗೆ ಗೊತ್ತಿರುತ್ತದೆ ಎಂದು ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎನ್ನುವ ಭಾವನೆ ಎಲ್ಲರಿಗೂ ಇದೆ. ಕೆ ಎನ್ ರಾಜಣ್ಣಗೆ ಡಿಕೆ ಶಿವಕುಮಾರ್ ಮೇಲೆ ಪ್ರೀತಿ ಇದೆ. ಅದಕ್ಕೆ ಅವರು ಹಾಗೆ ಮಾತನಾಡುತ್ತಾರೆ. ಕಲ್ಲಿಗೆ ಏಟು ಬಿದ್ದಾಗಲೇ ಶಿಲೆ ಆಗುವುದು. ಅವರು ತಟ್ಟುತ್ತಿದ್ದಾರೆ ತಟ್ಟಲಿ. ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬು ಇದೆಯೋ ಇಲ್ಲವೋ ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ.
ಬಹಿರಂಗ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೋ ಇಲ್ವೋ ಮುಖ್ಯಮಂತ್ರಿ AICC ಅಧ್ಯಕ್ಷರು, ರಾಜ್ಯ ಉಸ್ತುವಾರಿಗಳನ್ನ ಕೇಳಿ. ಒಳ್ಳೆಯದಾಗಬೇಕು ಅಂದರೆ ಸಾಕಷ್ಟು ಜನರ ಆಶೀರ್ವಾದ ಬೇಕು. ಆಶೀರ್ವಾದ ಮಾಡುತ್ತಿದ್ದಾರೆ ಪ್ರಸಾದ ಕೊಡುತ್ತಿದ್ದಾರೆ. ಪ್ರಸಾದ ಜಾಸ್ತಿಯಾದರೂ ಹೊಟ್ಟೆ ನೋವು ಬರಲ್ಲ ಎಂದರು.
ಪವರ್ ಶೇರಿಂಗ್ ಬಗ್ಗೆ ಮಾಹಿತಿ ಇಲ್ಲ. ನಾನು ಒಬ್ಬ ಕಾರ್ಯಕರ್ತ ಅಧಿಕಾರ ಹಂಚಿಕೆಯ ಬಗ್ಗೆ ಈಗ ಚರ್ಚೆ ಏಕೆ? ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಕೆಎಂಎಫ್ ಅಧ್ಯಕ್ಷ ಸ್ಥಾನ ಸೇರಿ ಯಾವುದೇ ಹುದ್ದೆ ಆಕಾಂಕ್ಷಿ ನಾನಲ್ಲ. ಜನರು ನನ್ನನ್ನು ಸೋಲಿಸಿದ್ದಾರೆ ಸದ್ಯಕ್ಕೆ ರೆಸ್ಟ್ ಮಾಡುತ್ತಿದ್ದೇನೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ತಿಳಿಸಿದರು.