ಬೆಂಗಳೂರು : 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೈಲರ್ಟ್ ಘೋಷಣೆ ಮಾಡಲಾಗಿದೆ. ಸಿಲಿಕಾನ್ ಸಿಟಿಯಲ್ಲಿ 9 ಡಿಸಿಪಿಗಳ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
BIGG NEWS : ಹರ್ ಘರ್ ತಿರಂಗಾ ಅಭಿಯಾನ : ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋಗೆ ರಾಷ್ಟ್ರಧ್ವಜ ಹಾಕಿಕೊಂಡ RSS
ಭದ್ರತೆಗಾಗಿ 1,700 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 10 KSRP ತುಕಡಿ, 15 ಎಸಿಪಿ, 44 ಪಿಐ, 14 ಪಿಎಸ್ಐ, 77 ಎ ಎಸ್ ಐ, 600 ಕಾನ್ಸ್ ಟೇಬಲ್ ಗಳನ್ನು, 77 ಮಹಿಳಾ ಸಿಬ್ಬಂದಿ, 160 ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
BIGG NEWS : ಹರ್ ಘರ್ ತಿರಂಗಾ ಅಭಿಯಾನ : ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋಗೆ ರಾಷ್ಟ್ರಧ್ವಜ ಹಾಕಿಕೊಂಡ RSS
2 ವರ್ಷಗಳ ನಂತರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಚಾಮರಾಜಪೇಟೆ ಮೈದಾನದಲ್ಲಿಯೂ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು