ನವದೆಹಲಿ:ದೇಶದಲ್ಲಿ ನಿರುದ್ಯೋಗ ದರವು ಡಿಸೆಂಬರ್ನಲ್ಲಿ ಶೇಕಡಾ 8.30 ರಷ್ಟು ಹೆಚ್ಚಾಗಿದೆ, ಇದು ಕಳೆದ 16 ತಿಂಗಳಲ್ಲೇ ಅತ್ಯಧಿಕವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಅಂಕಿಅಂಶಗಳು ತಿಳಿಸಿವೆ. ನವೆಂಬರ್ ನಲ್ಲಿ ನಿರುದ್ಯೋಗ ದರವು ಶೇಕಡಾ 8 ರಷ್ಟಿತ್ತು ಎಂದು ಅದು ಹೇಳಿದೆ.
ನಗರ ನಿರುದ್ಯೋಗ ದರವು ಶೇಕಡಾ 10.09 ಕ್ಕೆ ಏರಿದರೆ, ಗ್ರಾಮೀಣ ನಿರುದ್ಯೋಗ ದರವು ಡಿಸೆಂಬರ್ನಲ್ಲಿ ಶೇಕಡಾ 7.44 ಕ್ಕೆ ಇಳಿದಿದೆ ಎಂದು ಸಿಎಂಐಇ ದತ್ತಾಂಶವು ತೋರಿಸಿದೆ. ನವೆಂಬರ್ ತಿಂಗಳಲ್ಲಿ ನಗರ ಮತ್ತು ಗ್ರಾಮೀಣ ನಿರುದ್ಯೋಗ ದರವು ಕ್ರಮವಾಗಿ ಶೇಕಡಾ 8.96 ಮತ್ತು ಶೇಕಡಾ 7.55 ರಷ್ಟಿತ್ತು ಅಂಥ ತಿಳಿಸಿದೆ.
ನಿರುದ್ಯೋಗ ಮತ್ತು ಹಣದುಬ್ಬರವು ಕೇಂದ್ರ ಸರ್ಕಾರದ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ . 2022-23 ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ನಗರ ನಿರುದ್ಯೋಗ ದರವು ಸತತ ಐದನೇ ತ್ರೈಮಾಸಿಕದಲ್ಲಿ ಶೇಕಡಾ 7.2 ಕ್ಕೆ ಇಳಿದಿದೆ ಎಂದು ನವೆಂಬರ್ನಲ್ಲಿ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಓ) ಬಿಡುಗಡೆ ಮಾಡಿದ ಇತ್ತೀಚಿನ ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (ಪಿಎಲ್ಎಫ್ಎಸ್) ತಿಳಿಸಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಮಿಕ ಮಾರುಕಟ್ಟೆ ಪರಿಸ್ಥಿತಿಗಳು ಸುಧಾರಿಸಿದವು. ಮುಖ್ಯವಾಗಿ ಗ್ರಾಮೀಣ ಭಾರತವು ಕಾರ್ಮಿಕ ಪರಿಸ್ಥಿತಿಗಳಲ್ಲಿನ ಪರಿವರ್ತನೆಗೆ ದೊಡ್ಡ ಕೊಡುಗೆಯನ್ನು ನೀಡಿತು. ಡಿಸೆಂಬರ್ನಲ್ಲಿ ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣವು ಶೇಕಡಾ 40.48 ಕ್ಕೆ ಏರಿದೆ, ಇದು 12 ತಿಂಗಳಲ್ಲೇ ಅತ್ಯಧಿಕವಾಗಿದೆ ಎಂದು ವರದಿ ತಿಳಿಸಿದೆ.
ಡಿಸೆಂಬರ್ ನಲ್ಲಿ ಅತಿ ಹೆಚ್ಚು ನಿರುದ್ಯೋಗ ದರ ಹೊಂದಿರುವ ಟಾಪ್ 5 ರಾಜ್ಯಗಳು:
ಹರಿಯಾಣ 37.4
ರಾಜಸ್ಥಾನ 28.5
ದೆಹಲಿ 20.8
ಬಿಹಾರ 19.1
ಜಾರ್ಖಂಡ್ 18
ಡಿಸೆಂಬರ್ ನಲ್ಲಿ ಅತಿ ಕಡಿಮೆ ನಿರುದ್ಯೋಗ ದರವನ್ನು ಹೊಂದಿರುವ ಟಾಪ್ 5 ರಾಜ್ಯಗಳು:
ಒಡಿಶಾ 0.9
ಗುಜರಾತ್ 2.3
ಕರ್ನಾಟಕ 2.5
ಮೇಘಾಲಯ 2.7
ಮಹಾರಾಷ್ಟ್ರ 3.1