2024 ತಂತ್ರಜ್ಞಾನ ಮತ್ತು ವೈದ್ಯಕೀಯ ಎರಡರಲ್ಲೂ ನಂಬಲಾಗದ ಪ್ರಗತಿಯ ವರ್ಷವಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಬದಲಾಯಿಸುವ ಕೈಗಾರಿಕೆಗಳಿಂದ ಹಿಡಿದು ಪರಮಾಣು ಶಕ್ತಿ, ಬಾಹ್ಯಾಕಾಶ ಪರಿಶೋಧನೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಪ್ರಮುಖ ಪ್ರಗತಿಗಳವರೆಗೆ, ಇದು ನೆನಪಿಡುವ ಒಂದು ವರ್ಷವಾಗಿದೆ. ಆದರೆ ಕಥೆಯು ಹೆಚ್ಚು ಹಿಂದಕ್ಕೆ ಹೋಗುತ್ತದೆ – ಇದು ಒಂದು ದಶಕದ ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಭಾರತವು 5-ಜಿ ಜಾಲಗಳನ್ನು ಹೊರತರುವುದರಿಂದ ಹಿಡಿದು 4 ಮೇಡ್-ಇನ್-ಇಂಡಿಯಾ ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ತನಕ ಎಲ್ಲಾ ಅಡೆತಡೆಗಳನ್ನು ದಾಟಿದೆ, ಅದು ತನಗಾಗಿ ಮಾತ್ರವಲ್ಲದೆ ಇಡೀ ಜಗತ್ತಿಗಾಗಿ.
ಇಂದು ಜಗತ್ತು ಭಾರತದ ನಾವೀನ್ಯತೆಯ ಮನೋಭಾವವನ್ನು ಗಮನಿಸುತ್ತಿದೆ. 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಮತ್ತು ದಾಖಲೆಯ 64,480 ಪೇಟೆಂಟ್ ಅರ್ಜಿಗಳನ್ನು 2023ರಲ್ಲಿ ಸಲ್ಲಿಸಲಾಗಿದೆ, ಭಾರತವು ಪೇಟೆಂಟ್ ಫೈಲಿಂಗ್‌ನಲ್ಲಿ ಜಾಗತಿಕವಾಗಿ 6ನೇ ಅತಿದೊಡ್ಡ ಸ್ಥಾನವನ್ನು ಸದೃಢವಾಗಿ ಪಡೆದುಕೊಂಡಿದೆ.
ಈ ದಾಖಲೆಯು 2024ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡ ಮಹತ್ವದ ಪ್ರಗತಿಗಳು ಮತ್ತು ನವೀನ ಯೋಜನೆಗಳನ್ನು ಎತ್ತಿ ತೋರಿಸುತ್ತದೆ.
ವೈದ್ಯಕೀಯ ಮತ್ತು ಆರೋಗ್ಯ ಪ್ರಗತಿಗಳು
ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ಐ) ಮತ್ತು ಬಲ್ಕ್ ಡ್ರಗ್ ಪಾರ್ಕ್‌ಗಳಂತಹ ಉಪಕ್ರಮಗಳ ಬೆಂಬಲದಿಂದಾಗಿ, 2024ಕ್ಕೆ ಕೊನೆಗೊಂಡ ಕಳೆದ ದಶಕದಲ್ಲಿ ಭಾರತದ ಔಷಧೀಯ ರಫ್ತು 15 ಶತಕೋಟಿ ಡಾಲರ್ ನಿಂದ ಸುಮಾರು 28 ಶತಕೋಟಿ ಡಾಲರ್ ಗೆ ಏರಿಕೆ ಕಂಡಿದೆ. ಅದೇ ರೀತಿ, ಜೈವಿಕ ತಂತ್ರಜ್ಞಾನವು 2014 ರಲ್ಲಿ ಇದ್ದ 10 ಶತಕೋಟಿ ಡಾಲರ್ ನಿಂದ 2024ರಲ್ಲಿ 130 ಶತಕೋಟಿ ಡಾಲರ್ ಗೆ ಹೆಚ್ಚಾಗಿ, 13 ಪಟ್ಟು ವಿಸ್ತರಿಸಿದೆ. 2030 ರ ಹೊತ್ತಿಗೆ 300 ಶತಕೋಟಿ ಡಾಲರ್ ವಹಿವಾಟಿನ ಗುರಿ ಹೊಂದಿದೆ. 2024ರ ವರ್ಷವು ಭಾರತದ ಜಾಗತಿಕ ಆರೋಗ್ಯ ಸಂರಕ್ಷಣೆ ರಂಗದ ನಾಯಕತ್ವವನ್ನು ಮತ್ತಷ್ಟು ಭದ್ರಪಡಿಸಿದೆ.
- ಭಾರತವು ತನ್ನ ಮೊದಲ ಸ್ಥಳೀಯ ಪ್ರತಿಜೀವಕವಾದ ನಾಫಿಥ್ರೊಮೈಸಿನ್ ಅಭಿವೃದ್ಧಿಪಡಿಸಿದೆ, ಇದು 3 ದಿನಗಳ ಚಿಕಿತ್ಸಾ ಕ್ರಮದೊಂದಿಗೆ 10 ಪಟ್ಟು ಪರಿಣಾಮಕಾರಿತ್ವದೊಂದಿಗೆ ಔಷಧ-ನಿರೋಧಕ ನ್ಯುಮೋನಿಯಾ ವಿರುದ್ಧದ ಪ್ರಗತಿಯಾಗಿದೆ.
- ಭಾರತವು NexCAR19 ಅನ್ನು ಅನಾವರಣಗೊಳಿಸಿದ್ದು, ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸ್ವದೇಶದಲ್ಲಿ ಅಭಿವೃದ್ಧಿಪಡಿಸಿದ ಮೊದಲ CAR-T ಸೆಲ್ ಚಿಕಿತ್ಸೆಯಾಗಿದೆ.
- ಜಾಗತಿಕವಾಗಿ, ಔಷಧ ಪೂರೈಕೆ ಕೊರತೆ ನಿಭಾಯಿಸಲು ಭಾರತವು ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ಮತ್ತು ಐರೋಪ್ಯ ಒಕ್ಕೂಟದ ಜತೆಗೆ ಜೈವಿಕ ಔಷಧೀಯ ಒಕ್ಕೂಟವನ್ನು ಸೇರಿಕೊಂಡಿದೆ.
- ಭಾರತವು 30 ವರ್ಷಗಳ ನಂತರ ಪೆನ್ಸಿಲಿನ್ ಜಿ ಸ್ಥಳೀಯ ಉತ್ಪಾದನೆಯನ್ನು ಪುನರಾರಂಭಿಸಿದೆ, ಇದು ಔಷಧೀಯ ವಲಯವನ್ನು ಸ್ವಾವಲಂಬಿಯನ್ನಾಗಿ ಮಾಡುವ ಮೈಲಿಗಲ್ಲಾಗಿದೆ.
ರಕ್ಷಣೆ
ಉದಾರೀಕೃತ ಎಫ್‌ಡಿಐ, ಸಕಾರಾತ್ಮಕ ಸ್ವದೇಶೀಕರಣ ಪಟ್ಟಿಗಳು ಮತ್ತು ಕಳೆದ ದಶಕದಲ್ಲಿ ಉದ್ಯಮ ಮತ್ತು ಸ್ಟಾರ್ಟಪ್‌ಗಳಿಗೆ ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಲಯ ತೆರೆಯುವಿಕೆಯಂತಹ ಪರಿವರ್ತನೀಯ ಸುಧಾರಣೆಗಳು ಸ್ಥಳೀಯ ಉತ್ಪಾದನೆಯನ್ನು 2024ರಲ್ಲಿ 1.27 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಕಂಡು, ರಫ್ತು ವಹಿವಾಟು 30 ಪಟ್ಟು ಹೆಚ್ಚಿದೆ.
2024 ಕೊನೆಗೊಳ್ಳುತ್ತಿದ್ದಂತೆ, ಭಾರತವು ಜಾಗತಿಕ ರಕ್ಷಣಾ ನಾಯಕನಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ, ಕಾರ್ಯತಂತ್ರದ ನಾವೀನ್ಯತೆಯಲ್ಲಿ ಐತಿಹಾಸಿಕ ಮೈಲಿಗಲ್ಲುಗಳನ್ನು ಸಾಧಿಸಿದೆ.
- ಮಹತ್ವದ ಪ್ರಗತಿ ಗುರುತಿಸುವ ಮೂಲಕ, ಡಿಆರ್ ಡಿಒ ಮಿಷನ್ ದಿವ್ಯಾಸ್ತ್ರದ ಅಡಿ, ಎಐಆರ್ ವಿ ತಂತ್ರಜ್ಞಾನದೊಂದಿಗೆ ಅಗ್ನಿ-5 ಕ್ಷಿಪಣಿಯನ್ನು ಯಶಸ್ವಿಯಾಗಿ ಹಾರಾಟ-ಪರೀಕ್ಷೆ ನಡೆಸಿತು, ಇದು ಸುಧಾರಿತ ಮರು-ಪ್ರವೇಶ ವ್ಯವಸ್ಥೆಗಳೊಂದಿಗೆ ಭಾರತವನ್ನು ರಾಷ್ಟ್ರಗಳ ಗಣ್ಯ ಗುಂಪಿನಲ್ಲಿ ಇರಿಸಿತು.
- ಪರಮಾಣು-ಸಮರ್ಥ ಕೆ–4 ಜಲಾಂತರ್ಗಾಮಿ-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಐಎನ್ಎಸ್ ಅರಿಘಾಟ್‌ನಿಂದ ಪರೀಕ್ಷಿಸಲಾಯಿತು, 3,500 ಕಿಮೀ ದಾಳಿ ಅಂತರದೊಂದಿಗೆ, ಇದು ಭಾರತದ ಜಲಾಂತರ್ಗಾಮಿ ಪರಮಾಣು ನಿರೋಧಕವನ್ನು ಬಲಪಡಿಸಿದೆ. ಇದು ಭಾರತವನ್ನು ಆಯ್ದ ರಾಷ್ಟ್ರಗಳ ಗುಂಪಿನಲ್ಲಿ ಇರಿಸಿದೆ.
- 5,000 ಕಿಮೀ ವರ್ಗದ ಬ್ಯಾಲಿಸ್ಟಿಕ್ ಬೆದರಿಕೆಗಳ ವಿರುದ್ಧ ರಕ್ಷಿಸುವ ರಾಷ್ಟ್ರದ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ, ಡಿಆರ್ ಡಿಒ ಹಂತ-2 ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (ಬಿಎಂಡಿ) ವ್ಯವಸ್ಥೆಯ ಯಶಸ್ವಿ ಪ್ರಯೋಗಗಳನ್ನು ನಡೆಸಿತು.
- ಹೆಚ್ಚುವರಿಯಾಗಿ, ಡಿಆರ್ ಡಿಒ ಎಲ್ಆರ್ ಎಲ್ಎಸಿಎಂ ಯಶಸ್ವಿ ಪರೀಕ್ಷೆಗಳನ್ನು ನಡೆಸಿತು, ಇದು ಭಾರತದ ಕ್ಷಿಪಣಿ ಶಸ್ತ್ರಾಗಾರಕ್ಕೆ ನಿರ್ಣಾಯಕ ಸೇರ್ಪಡೆಯಾಗಿದೆ. ಈ ಕ್ಷಿಪಣಿಯನ್ನು ಹೆಚ್ಚಿನ ನಿಖರತೆಯೊಂದಿಗೆ ದೀರ್ಘ ವ್ಯಾಪ್ತಿಯ ಗುರಿಗಳನ್ನು ಹೊಡೆಯುವಂತೆ ವಿನ್ಯಾಸಗೊಳಿಸಲಾಗಿದೆ, ಇದು ಭಾರತದ ಕಾರ್ಯತಂತ್ರ ಸಾಮರ್ಥ್ಯಗಳನ್ನು ಹೆಚ್ಚಿಸಿದೆ.
ಪರಮಾಣು ಶಕ್ತಿ
ಭಾರತದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 2014ರಲ್ಲಿ ಇದ್ದ 4,780 ಮೆಗಾವ್ಯಾಟ್ ನಿಂದ 2024ರಲ್ಲಿ 8,180 ಮೆಗಾವ್ಯಾಟ್ ಗೆ ದ್ವಿಗುಣಗೊಂಡಿದೆ. ಸರ್ಕಾರವು 2031-32ರ ವೇಳೆಗೆ 22,480 ಮೆಗಾವ್ಯಾಟ್ ಗೆ ಈ ಸಾಮರ್ಥ್ಯವನ್ನು 3 ಪಟ್ಟು ಹೆಚ್ಚಿಸುವ ಗುರಿ ಹೊಂದಿದೆ, ಇದು ಪರಮಾಣು ಶಕ್ತಿ(ಇಂಧನ)ಯನ್ನು ವಿಸ್ತರಿಸುವ ಬಲವಾದ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಪ್ರಸ್ತುತ, ಭಾರತವು ಸುಧಾರಿತ ಥೋರಿಯಂ ಬಳಕೆಯ ತಂತ್ರಜ್ಞಾನಗಳನ್ನು ಹೊಂದಿರುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ, ಇದನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ.
- ಕಲ್ಪಾಕ್ಕಂನಲ್ಲಿರುವ ಮೊದಲ ಸ್ಥಳೀಯ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಎಫ್‌ಬಿಆರ್) ನಲ್ಲಿ ಕೋರ್ ಲೋಡಿಂಗ್‌ನ ಐತಿಹಾಸಿಕ ಆರಂಭವು ಭಾರತದ 3 ಹಂತದ ಪರಮಾಣು ಕಾರ್ಯಕ್ರಮದ 2ನೇ ಹಂತಕ್ಕೆ ಪ್ರವೇಶ ಸೂಚಿಸಿದೆ, ಇದು ಅದರ ವಿಶಾಲವಾದ ಥೋರಿಯಂ ನಿಕ್ಷೇಪಗಳ ಸಾಮರ್ಥ್ಯವನ್ನು ಹೊರತೆಗೆಯಲು ನಿರ್ಣಾಯಕ ಹೆಜ್ಜೆಯಾಗಿದೆ.
- ಹೆಚ್ಚುವರಿಯಾಗಿ, ಕೇಂದ್ರ ಬಜೆಟ್ 2024-25ರಲ್ಲಿ ಸಣ್ಣ ರಿಯಾಕ್ಟರ್‌ಗಳ ಸ್ಥಾಪನೆ ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಸಹಯೋಗವನ್ನು ಘೋಷಿಸಿದೆ. ಇದು ಭವಿಷ್ಯಕ್ಕಾಗಿ ಸುರಕ್ಷಿತ, ಸಮರ್ಥನೀಯ ಮತ್ತು ನವೀನ ಪರಮಾಣು ಇಂಧನ ಪರಿಹಾರಗಳಿಗೆ ಭಾರತದ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಜೈವಿಕ ತಂತ್ರಜ್ಞಾನ ಮತ್ತು ಜೆನೆಟಿಕ್ಸ್
ಭಾರತದ ಜೈವಿಕ ಆರ್ಥಿಕತೆಯು ಗಮನಾರ್ಹವಾದ ಬೆಳವಣಿಗೆ ಅನುಭವಿಸಿದೆ, 2014ರಲ್ಲಿ ಇದ್ದ 10 ಶತಕೋಟಿ ಡಾಲರ್ ನಿಂದ 2024 ರಲ್ಲಿ 130 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ.
- ಜಿನೋಮ್ ಇಂಡಿಯಾ ಪ್ರಾಜೆಕ್ಟ್ ಅಡಿ, 10,000 ಜೀನೋಮ್‌ಗಳ ಯಶಸ್ವಿ ಅನುಕ್ರಮವು ಆನುವಂಶಿಕ ಸಂಶೋಧನೆಯ ಒಂದು ಅದ್ಭುತ ಕ್ಷಣವನ್ನು ಗುರುತಿಸಿದೆ, ಇದು ವೈಯಕ್ತಿಕಗೊಳಿಸಿದ ಆರೋಗ್ಯ ರಕ್ಷಣೆಯ ಪರಿಹಾರಗಳಿಗೆ ದಾರಿ ಮಾಡಿಕೊಡುತ್ತದೆ.
- BioE3 ನೀತಿಗೆ ಸರ್ಕಾರ ನೀಡಿರುವ ಅನುಮೋದನೆಯು ಕಾರ್ಯತಂತ್ರ ವಲಯಗಳಲ್ಲಿ ಉನ್ನತ-ಕಾರ್ಯಕ್ಷಮತೆಯ ಜೈವಿಕ ಉತ್ಪಾದನೆಯ ಮೂಲಕ ಸುಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆ ಹೆಚ್ಚಿಸುವ ಗುರಿ ಹೊಂದಿದೆ.
- ಹೆಚ್ಚುವರಿಯಾಗಿ, ಏಕೀಕೃತ ಜೀನೋಮಿಕ್ ಚಿಪ್ಸ್ ಮತ್ತು ಕೈಗೆಟಕುವ ದರದಲ್ಲಿ ಲಿಂಗ-ವಿಂಗಡಿಸಿದ ವೀರ್ಯ ತಂತ್ರಜ್ಞಾನವು ಜಾನುವಾರುಗಳ ಉತ್ಪಾದಕತೆ ಮತ್ತು ರೈತರನ್ನು ಸಬಲೀಕರಣಗೊಳಿಸಲು ಪ್ರಮುಖ ಉತ್ತೇಜನ ಒದಗಿಸಿದೆ.
ಬಾಹ್ಯಾಕಾಶ
2033ರ ವೇಳೆಗೆ ಭಾರತದ ಬಾಹ್ಯಾಕಾಶ ಆರ್ಥಿಕತೆಯನ್ನು 11 ಶತಕೋಟಿ ಡಾಲರ್ ಮೊತ್ತದ ರಫ್ತು ಸೇರಿದಂತೆ 44 ಶತಕೋಟಿ ಡಾಲರ್ ಗೆ ಬೆಳೆಸುವ ದಿಟ್ಟ ದೃಷ್ಟಿಯೊಂದಿಗೆ, ಸರ್ಕಾರವು ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುತ್ತಿದೆ.
ನಾವೀನ್ಯತೆಗೆ ಚಾಲನೆ ನೀಡುವ ಮೂಲಕ, ಮಹತ್ವಾಕಾಂಕ್ಷೆಯ ಕಾರ್ಯಗಳನ್ನು ಮುನ್ನಡೆಸುವ ಮೂಲಕ ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ, ಭಾರತವು ಜಾಗತಿಕ ಬಾಹ್ಯಾಕಾಶ ಗಡಿಯಲ್ಲಿ ಪ್ರಬಲ ಶಕ್ತಿಯಾಗಿ ವೇಗವಾಗಿ ಹೊರಹೊಮ್ಮುತ್ತಿದೆ.
- ಸರ್ಕಾರವು 2 ಪ್ರಮುಖ ಬಾಹ್ಯಾಕಾಶ ವಿಜ್ಞಾನ ಕಾರ್ಯಾಚರಣೆಗಳನ್ನು ಅನುಮೋದಿಸಿದೆ, ವೀನಸ್ ಆರ್ಬಿಟರ್ ಮಿಷನ್(ವಿಒಎಂ) ಮತ್ತು ಚಂದ್ರಯಾನ-4, ಗ್ರಹಗಳ ಪರಿಶೋಧನೆಯಲ್ಲಿ ಭಾರತದ ಸಾಮರ್ಥ್ಯಗಳನ್ನು ಮುನ್ನಡೆಸುತ್ತದೆ.
- ಭಾರತವು ತನ್ನ ಮೊದಲ ಬ್ಯಾಚ್ ಗಗನಯಾನ ಗಗನಯಾತ್ರಿಗಳನ್ನು ಘೋಷಿಸಿತು, ಅವರು ಕಠಿಣ ತರಬೇತಿಯನ್ನು ಪಡೆದಿದ್ದಾರೆ ಮತ್ತು ಗಗನಯಾನ ಮಿಷನ್‌ನ ಭಾಗವಾಗಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿದೆ.
- ಸ್ಕೈರೂಟ್ ಏರೋಸ್ಪೇಸ್ ಕಲಾಂ-250 ಮತ್ತು ಅಗ್ನಿಕುಲ್ ಕಾಸ್ಮೊಸ್ ವಿಶ್ವದ ಮೊದಲ ಸಿಂಗಲ್-ಪೀಸ್ 3ಡಿ–ಮುದ್ರಿತ ರಾಕೆಟ್ ಎಂಜಿನ್ ಉಡಾವಣೆ ಮಾಡುವುದರೊಂದಿಗೆ, ಭಾರತವು ಖಾಸಗಿ ಬಾಹ್ಯಾಕಾಶ ಆವಿಷ್ಕಾರದಲ್ಲಿ ಗಮನಾರ್ಹ ದಾಪುಗಾಲುಗಳನ್ನು ಕಂಡಿದೆ.
- ಜೊತೆಗೆ, ಭಾರತದ 2ನೇ ಬಾಹ್ಯಾಕಾಶ ಪೋರ್ಟ್‌ಗೆ ತಮಿಳುನಾಡಿನ ಕುಲಶೇಖರಪಟ್ಟಿಣಂನಲ್ಲಿ ಅಡಿಪಾಯ ಹಾಕಲಾಯಿತು, ಇದು ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಉತ್ತಮಗೊಳಿಸಿದೆ.
- ಇಸ್ರೋ ತ್ರಿಶ್ನಾ ಇಂಡೋ-ಫ್ರೆಂಚ್ ಉಪಗ್ರಹ ಮಿಷನ್ ಮತ್ತು ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಪ್ರೋಬಾ-3 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ ವಿ–ಸಿ59 ರಾಕೆಟ್ ಸೇರಿದಂತೆ ಹಲವಾರು ಪರಿಣಾಮಕಾರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು.
- ಭಾರತದ ಸೌರ ಮಿಷನ್, ಆದಿತ್ಯ-ಎಲ್1, ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಹೆಚ್ಚಿಸುವ ತನ್ನ ಮೊದಲ ವೈಜ್ಞಾನಿಕ ಸಂಶೋಧನೆಗಳನ್ನು ಬಿಡುಗಡೆ ಮಾಡಿದೆ.
- ಚಂದ್ರಯಾನ-3 ಮಿಷನ್‌ನ ಐತಿಹಾಸಿಕ ಚಂದ್ರನ ಲ್ಯಾಂಡಿಂಗ್ ಸ್ಮರಿಸುತ್ತಾ ರಾಷ್ಟ್ರವು ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಿತು.
- ವರ್ಷವು ಭಾರತೀಯ ಅಂತರಿಕ್ಷ್ ನಿಲ್ದಾಣ (ಬಿಎಎಸ್-1)ಕ್ಕೆ ಅನುಮೋದನೆ ನೀಡುವ ಜತೆಗೆ, MACE ವೀಕ್ಷಣಾಲಯದ ಉದ್ಘಾಟನೆ ನೆರವೇರಿಸಿದೆ. ಇದು ಬಾಹ್ಯಾಕಾಶ ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ಭಾರತದ ಮುಂದುವರಿದ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತದೆ. ಲಡಾಖ್‌ನ ಹಾನ್ಲೆಯಲ್ಲಿರುವ ಪ್ರಮುಖ ವಾಯುಮಂಡಲದ ಚೆರೆಂಕೋವ್ ಪ್ರಯೋಗ (MACE) ವೀಕ್ಷಣಾಲಯವು ವಿಶ್ವದ ಅತಿ ಎತ್ತರದ (ಎತ್ತರದಲ್ಲಿ) ಮತ್ತು 2ನೇ ಅತಿದೊಡ್ಡ ಚೆರೆಂಕೋವ್ ದೂರದರ್ಶಕವಾಗಿದೆ.
ಮೂಲಸೌಕರ್ಯ
2014ರಿಂದ ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗೊಳಿಸಲು, ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಮತ್ತು ವಿಳಂಬ ಕಡಿಮೆ ಮಾಡಲು ಭಾರತವು ವಿವಿಧ ನವೀನ ವಿಧಾನಗಳಲ್ಲಿ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ಇತ್ತೀಚಿನ ಆಕ್ಸ್ ಫರ್ಡ್ ಅಧ್ಯಯನದ ಪ್ರಕಾರ, ಪ್ರಗತಿ ವೇದಿಕೆಯು 205 ಶತಕೋಟಿ ಡಾಲರ್ ಮೌಲ್ಯದ 340 ಯೋಜನೆಗಳನ್ನು ವೇಗಗೊಳಿಸಿದೆ ಎಂದು ಹೈಲೈಟ್ ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮತ್ತು ಡಿಜಿಟಲ್ ಡ್ಯಾಶ್‌ಬೋರ್ಡ್‌ಗಳ ಬಳಕೆ ಟ್ರ್ಯಾಕಿಂಗ್ ಪ್ರಗತಿ ಕಂಡಿದೆ. ಸ್ವಾಮಿತ್ವದಂತಹ ಉಪಕ್ರಮಗಳೊಂದಿಗೆ, ಭಾರತವು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುತ್ತಿದೆ. ಇಲ್ಲಿಯವರೆಗೆ, 1.5 ಲಕ್ಷ ಹಳ್ಳಿಗಳಲ್ಲಿ 2.2 ಕೋಟಿ ಆಸ್ತಿ ಹಕ್ಕುಗಳನ್ನು ನೀಡಲಾಗಿದೆ.
2024 ರಲ್ಲಿ, ಭಾರತವು ತನ್ನ ಸಾರಿಗೆ ಮೂಲಸೌಕರ್ಯ ಪರಿವರ್ತಿಸುವಲ್ಲಿ ಮಹತ್ವದ ದಾಪುಗಾಲುಗಳನ್ನು ಹಾಕಿ, ಭವಿಷ್ಯದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.
- ಐಐಟಿ ಮದ್ರಾಸ್‌ನಲ್ಲಿ ಭಾರತದ ಮೊದಲ ಹೈಪರ್‌ಲೂಪ್ ಪರೀಕ್ಷಾ ಪಥವನ್ನು ಪೂರ್ಣಗೊಳಿಸಿದ್ದು, ಹೈಸ್ಪೀಡ್ ರೈಲು ಪ್ರಯಾಣಕ್ಕಾಗಿ ರಾಷ್ಟ್ರದ ದೃಷ್ಟಿಯನ್ನು ಮುನ್ನಡೆಸಿದ್ದು, ಇದೊಂದು ಪ್ರಮುಖ ಮೈಲಿಗಲ್ಲಾಗಿದೆ.
- ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್(ಜಿಎನ್ ಎಸ್ಎಸ್)ಗಾಗಿ ಪ್ರಾಯೋಗಿಕ ಅಧ್ಯಯನಗಳನ್ನು ಪೂರ್ಣಗೊಳಿಸುವ ಮೂಲಕ ರಸ್ತೆ ಮೂಲಸೌಕರ್ಯವನ್ನು ಆಧುನೀಕರಿಸುವಲ್ಲಿ ಭಾರತವು ಪ್ರಮುಖ ಹೆಜ್ಜೆ ಇಟ್ಟಿದೆ. ಇದು ದೂರ ಆಧಾರಿತ ಎಲೆಕ್ಟ್ರಾನಿಕ್ ಟೋಲಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ.
ಕ್ವಾಂಟಮ್, ಕೃತಕ ಬುದ್ಧಿಮತ್ತೆ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನಗಳ ಬಳಕೆ
ನ್ಯಾಶನಲ್ ಕ್ವಾಂಟಮ್ ಮಿಷನ್ ಕ್ವಾಂಟಮ್ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕತ್ವದ ಕಡೆಗೆ ಭಾರತವನ್ನು ಮುಂದೂಡುತ್ತಿದೆ, ಆದರೆ ಭಾರತ್‌ಜೆನ್ ಭಾರತಕ್ಕೆ ಅನುಗುಣವಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ರಾಷ್ಟ್ರದ ಬದ್ಧತೆಯನ್ನು ಪ್ರದರ್ಶಿಸುತ್ತದೆ. 2024ರಲ್ಲಿ, ಸುರಕ್ಷಿತ ಡಿಜಿಟಲ್ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ ಆವಿಷ್ಕಾರದಲ್ಲಿ ಭಾರತವು ತನ್ನ ಸ್ಥಾನವನ್ನು ಬಲಪಡಿಸುವ ಮಹತ್ವದ ದಾಪುಗಾಲುಗಳನ್ನು ಮಾಡಿದೆ.
- ವಿಶ್ವಾಸಾರ್ಹ ಡಿಜಿಟಲ್ ವ್ಯವಸ್ಥೆ ನಿರ್ಮಿಸಲು ರಾಷ್ಟ್ರೀಯ ಬ್ಲಾಕ್‌ಚೈನ್ ಫ್ರೇಮ್‌ವರ್ಕ್‌ನ ಪ್ರಾರಂಭದೊಂದಿಗೆ ಸುರಕ್ಷಿತ ಅಪ್ಲಿಕೇಶನ್‌ಗಳಿಗಾಗಿ ಬ್ಲಾಕ್‌ಚೇನ್-ಸೇವೆ ಒದಗಿಸುವ ಗುರಿ ಹೊಂದಿರುವ ‘ವಿಶ್ವಸ್ಯ: ನ್ಯಾಷನಲ್ ಬ್ಲಾಕ್‌ಚೈನ್ ಟೆಕ್ನಾಲಜಿ ಸ್ಟಾಕ್‘ ವೇದಿಕೆಗಳ ಬಿಡುಗಡೆಯೊಂದಿಗೆ ಬ್ಲಾಕ್‌ಚೈನ್ ತಂತ್ರಜ್ಞಾನಕ್ಕೆ ಪ್ರಮುಖ ಉತ್ತೇಜನ ದೊರೆತಿದೆ.
- ಭಾರತ್‌ಜೆನ್, ವಿಶ್ವದ ಮೊದಲ ಸರ್ಕಾರಿ-ಧನಸಹಾಯದ ಬಹುಮಾದರಿ ದೊಡ್ಡ ಭಾಷಾ ಮಾದರಿ ಯೋಜನೆ, ಭಾರತೀಯ ಭಾಷೆಗಳಲ್ಲಿ ದಕ್ಷ ಮತ್ತು ಅಂತರ್ಗತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ರೂಪಿಸುವ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.
- ಭಾರತಕ್ಕೆ ಪ್ರಥಮವಾಗಿ, ಫೈಬರ್ ಮತ್ತು ಫ್ರೀ-ಸ್ಪೇಸ್ ತಂತ್ರಜ್ಞಾನಗಳೆರಡನ್ನೂ ಬಳಸಿಕೊಂಡು ಭಾರತವು ಎಂಡ್-ಟು-ಎಂಡ್ ಕ್ವಾಂಟಮ್ ಸಂವಹನ ಲಿಂಕ್ ಅನ್ನು ಸ್ಥಾಪಿಸಿತು. ATelematics ಅಭಿವೃದ್ಧಿ ಕೇಂದ್ರ(C-DOT) ಮತ್ತು ಭೌತಿಕ ಸಂಶೋಧನಾ ಪ್ರಯೋಗಾಲಯ (PRL)ದ ಸಾಮರ್ಥ್ಯವನ್ನು ಪ್ರದರ್ಶಿಸಿತು.
2024 ನಾಗರೀಕ ಜಾಗೃತಿಯ ವರ್ಷವೆಂದು ಹೇಗೆ ಸಾಬೀತಾಯಿತು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ